Site icon PowerTV

ತಾಯಿ ಲೀಲಾವತಿಗೆ ಭವ್ಯ ಸ್ಮಾರಕ ನಿರ್ಮಿಸಿದ ಪುತ್ರ ವಿನೋದ್​ ರಾಜ್ !​

ನೆಲಮಂಗಲ: ಕನ್ನಡದ ಖ್ಯಾತ ನಟಿ ಲೀಲಾವತಿ ಇಹಲೋಕ ತ್ಯಜಿಸಿ ಡಿಸೆಂಬರ್​ 8ಕ್ಕೆ ಒಂದು ವರ್ಷವಾಗುತ್ತಿದ್ದು. ಇದರ ಹಿನ್ನಲೆಯಲ್ಲಿ ಅವರ ಭವ್ಯ ಸ್ಮಾರಕ ನಿರ್ಮಾಣ ಕಾರ್ಯವು ಪೂರ್ಣಗೊಂಡಿದೆ ಎಂದು ಮಾಹಿತಿ ದೊರೆತಿದೆ.

ಕನ್ನಡದ ಖ್ಯಾತ ನಟಿ ಲೀಲಾವತಿ ಮರಣಹೊಂದಿ ಒಂದು ವರ್ಷವಾಗುತ್ತಿದ್ದು. ಇದರ ಬೆನ್ನಲ್ಲೆ ಅವರ ಅಂತ್ಯಕ್ರಿಯೆಯಾದ ಸ್ಥಳದಲ್ಲಿ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದು. ಸುಮಾರು 1 ಕೋಟಿ ವೆಚ್ಚದಲ್ಲಿ ಭವ್ಯವಾದ ಸ್ಮಾರಕವನ್ನು ನಿರ್ಮಿಸಲಾಗಿದೆ. ಈ ಸ್ಮಾರಕಕ್ಕೆ ಲೀಲಾವತಿ ಅವರ ಮಗ ವಿನೋದ್​ ರಾಜ್​ ‘ತಾಯಿಯೇ ದೇವರು ವರನಟಿ ಡಾ.ಎಂ.ಲೀಲಾವತಿ ದೇಗುಲ’  ಎಂದು ಹೆಸರಿಟ್ಟಿದ್ದಾರೆ ಎಂದು ಮಾಹಿತಿ ದೊರೆತಿದೆ.

ಸಂಪೂರ್ಣವಾಗಿ ಅಮೃತ ಶಿಲೆ ಕಲ್ಲಿನಿಂದ ಸ್ಮಾರಕವನ್ನು ನಿರ್ಮಾಣ ಮಾಡಿದ್ದು. ಸಮಾಧಿ ಸುತ್ತಲು ಬೃಹತ್​ ಕಲ್ಲಿನ ಕಂಬಗಳಿಂದ ಮಂಟಪ ನಿರ್ಮಾಣ ಮಾಡಿಸಿದ್ದಾರೆ. ಇಂದು ಡಿಸಿಎಂ ಡಿ.ಕೆ ಶಿವಕುಮಾರ್​ ಅವರು ಸ್ಮಾರಕವನ್ನು ಉದ್ಘಾಟನೆ ಮಾಡಲಿದ್ದು. ಉದ್ಘಾಟನೆ ಮಾಡಿದ ನಂತರ ಅಭಿಮಾನಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ದೊರೆತಿದೆ.

 

Exit mobile version