Site icon PowerTV

ಕಾಂಗ್ರೆಸ್​ನಲ್ಲಿ ಒಳಜಗಳ ಆರಂಭವಾಗಿದೆ, ಬಡಿಗೆಯಲ್ಲಿ ಒಡೆದಾಡ್ಕೋತಾರೆ: ವಿಜಯೇಂದ್ರ

ಯಾದಗಿರಿ: ಕಾಂಗ್ರೆಸ್ ಪವರ್ ಶೇರಿಂಗ್​ಗಾಗಿ ಆರಂಭವಾಗಿರುವ ಪೈಟ್ ವಿಚಾರವಾಗಿ ಮಾತನಾಡಿದ ಬಿ.ವೈ ವಿಜಯೇಂದ್ರ. ಕಾಂಗ್ರೆಸ್​ನಲ್ಲಿ ಜಗಳಗಳು ಆರಂಭವಾಗಿದೆ. ಇಷ್ಟರಲ್ಲೆ ಬಡಿಗೆಯಲ್ಲಿ ಹೊಡೆದಾಡಿಕೊಳ್ತಾರೆ’ ಎಂದು ಹೇಳಿದರು.

ಯಾದಗಿರಿಯ ಶಹಾಪುರದಲ್ಲಿ ಮಾತನಾಡಿದ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇದ್ರ ‘ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರು ಒಳಗೊಂಡಂತೆ ಶಾಸಕರುಗಳು ಬಡಿಗೆ ತೆಗೆದುಕೊಂಡು ರಸ್ತೆಯಲ್ಲಿ ಹೊಡೆದಾಡ್ತಾರೆ. ಈಗ
ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಅವರು ತಮ್ಮ ಸ್ಥಾನ ತ್ಯಜಿಸಬೇಕು. ತಾನು ಮುಖ್ಯಮಂತ್ರಿ ಆಗಬೇಕೆಂದು ಡಿಕೆಶಿ ಹೋರಾಟ ಪ್ರಾರಂಭ ಮಾಡಿದ್ದಾರೆ. ಬರುವ ದಿನಗಳಲ್ಲಿ ಯಾವ ಮಟ್ಟಕ್ಕೆ ಹೋಗುತ್ತದೆ ಎಂದು ಉಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಮುಂದುವರಿದು ಮಾತನಾಡಿದ  ವಿಜಯೇಂದ್ರ ‘ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಮಾವೇಶ ಮಾಡ್ತಿದ್ದಾರೆ. ಡಿಕೆ ಶಿವಕುಮಾರ್​ರನ್ನು ಬದಿಗೆ ಸರಿಸಿ ಶಕ್ತಿ ಪ್ರದರ್ಶನ ಮಾಡಲು ಹೊರಟ್ಟಿದ್ದಾರೆ.  ಬರುವ ದಿನಗಳಲ್ಲಿ ಕಾಂಗ್ರೆಸ್​ನಲ್ಲಿ ಯಾವ ರೀತಿ ಬದಲಾವಣೆ ಆಗುತ್ತದೆ ನೋಡಿ
ಸಿದ್ದರಾಮಯ್ಯ ಸಿಎಂ ಅವಧಿ ಮುಗಿದಿದೆ ಅಧಿಕಾರ ಬಿಟ್ಟು ಕೊಡಿ ಎಂದು ಡಿಕೆ ಶಿವಕುಮಾರ್ ಅವರು ತೊಡೆ ತಟ್ಟಿಕೊಂಡು ಹೊರಟಿದ್ದಾರೆ’ ಇದರ ಪರಿಣಾಮವಾಗಿ ಕಾಂಗ್ರೆಸ್​ ನಾಯಕರು ಬೀದಿಗೆ ಬಂದು ಒಡೆದಾಡುತ್ತಾರೆ ಎಂದು ಹೇಳಿದರು.

ಗೃಹ ಸಚಿವ ಪರಮೇಶ್ವರ್​ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ವಿಜಯೇಂದ್ರ ‘ ಕಾಂಗ್ರೆಸ್​​ನಲ್ಲಿ ಬಹಳ ದೊಡ್ಡ ಮಟ್ಟದ ಅಸಮಧಾನ ಸ್ಪೋಟ ಆಗುತ್ತದೆ ಎಂದು ನಾನು ಹೇಳಿದ್ರೆ ಯಾರು ನಂಬಲ್ಲ. ಆದರೆ ಈಗಾಗಲೇ ಕಾಂಗ್ರೆಸ್​ನಲ್ಲಿ ಕಚ್ಚಾಟ ಶುರುವಾಗಿದೆ. ಯಾವ ರೀತಿ ಬಡಿದಾಡಿಕೊಳ್ತಾರೆ ನೋಡಬೇಕಿದೆ’ ಎಂದು ಹೇಳಿದರು.

 

Exit mobile version