Site icon PowerTV

ಮಗಳಿಗೆ ಹೊಸ ಜವಬ್ದಾರಿ ನೀಡಿದ ಸಚಿನ್​ ತೆಂಡೂಲ್ಕರ್​

ಮುಂಬೈ: ಸಚಿನ್ ತೆಂಡೂಲ್ಕರ್ ಫೌಂಡೇಷನ್ ಡೈರೆಕ್ಟರ್ ಆಗಿ ಪುತ್ರಿ ಸಾರಾ ತೆಂಡೂಲ್ಕರ್ ಅವರನ್ನು ನೇಮಿಸಲಾಗಿದೆ ಎಂದು ಕ್ರಿಕೆಟ್ ದಿಗ್ಗಜ ಸಚಿನ್‌ ತೆಂಡೂಲ್ಕರ್ ಘೋಷಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಸಚಿನ್ ತೆಂಡೂಲ್ಕರ್ ಸಂತೋಷವನ್ನು ಹಂಚಿಕೊಂಡಿದ್ದಾರೆ.

‘ಸಾರಾ ಅವರು ಯೂನಿವರ್ಸಿಟಿ ಕಾಲೇಜು ಲಂಡನ್‌ನಿಂದ ಕ್ಲಿನಿಕಲ್ ಮತ್ತು ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ’ ಎಂದು ಸಚಿನ್ ಮಾಹಿತಿ ನೀಡಿದ್ದಾರೆ. ‘ಕ್ರೀಡೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಮೂಲಕ ಭಾರತವನ್ನು ಸಶಕ್ತಗೊಳಿಸಲು ಆಕೆ ಪ್ರಯಾಣವನ್ನು ಪ್ರಾರಂಭಿಸಿದಾಗ ಜಾಗತಿಕ ಕಲಿಕೆಯು ಹೇಗೆ ಪರಿಪೂರ್ಣತೆಗೆ ತಲುಪಿದೆ ಎಂಬುದನ್ನು ನೆನಪಿಸುತ್ತದೆ’ ಎಂದು ಅವರು ಹೇಳಿದ್ದಾರೆ.

2019ರಲ್ಲಿ ಸಚಿನ್‌ ತೆಂಡೂಲ್ಕರ್ ಫೌಂಡೇಷನ್ ಅನ್ನು ಸ್ಥಾಪಿಸಲಾಗಿತ್ತು. ಮುಂದಿನ ಪೀಳಿಗೆಯ ಮಕ್ಕಳಿಗೆ ಸಮಾನ ಅವಕಾಶ ನೀಡುವ ಮೂಲಕ ಉತ್ತಮ ಸಮಾಜ ಹಾಗೂ ಜಗತ್ತನ್ನು ನಿರ್ಮಿಸಲು ತನ್ನ ಬದ್ಧತೆಯನ್ನು
ಪ್ರದರ್ಶಿಸುತ್ತಿದೆ.

Exit mobile version