Site icon PowerTV

ಸಿಲಿಂಡರ್​ ಸ್ಫೋಟ : ಕುಸಿದ ಮನೆ , ದಂಪತಿಗಳಿಗೆ ತೀವ್ರ ಗಾಯ!

ಕೋಲಾರ : ಗೃಹಬಳಕ ಸಿಲಿಂಡರ್​ ಸ್ಫೋಟಗೊಂಡ ಹಿನ್ನಲೆ ದಂಪತಿಗಳಿಬ್ಬರು ಆಸ್ಪತ್ರೆ ಪಾಲಾಗಿದ್ದು. ಇಡೀ ಸಂಪೂರ್ಣ ಮನೆ ಕುಸಿತವಾಗಿದೆ. ಸಿಲಿಂಡರ್​ ಸ್ಪೋಟದ ತೀವ್ರತೆಗೆ ಇಡೀ ಮನೆ ಛಿದ್ರವಾಗದ್ದು. ಗೃಹ ಬಳಕೆ  ವಸ್ತುಗಳು ನಾಶವಾಗಿದೆ ಎಂದು ಮಾಹಿತಿ ದೊರೆತಿದೆ.

ಕೋಲಾರ ತಾಲ್ಲೂಕಿನ ಕೋಡಿಕಣ್ಣೂರು ಗ್ರಾಮದಲ್ಲಿ ಘಟನೆ ನಡೆದಿದ್ದು. ಸಿಲಿಂಡರ್​ ಬದಲಿಸಿ ಸ್ಟೌವ್ ಅಂಟಿಸುವ ವೇಳೆ ಸಿಲಿಂಡರ್​ ಬ್ಲಾಸ್ಟ್​ ಆಗಿದೆ. ಸಿಲಿಂಡರ್​​ ಸ್ಫೋಟದ ತೀವ್ರತೆಗೆ ಇಡೀ ಮನೆ ಕುಸಿದಿದ್ದು. ಮನೆಯಲ್ಲಿದ್ದ ಗೃಹ ಬಳಕೆ ವಸ್ತುಗಳು ನಾಶವಾಗಿವೆ.

ಸಿಲಿಂಡರ್ ಬ್ಲಾಸ್ಟ್​​ ಆದ ಕಾರಣ ಮನೆಯಲ್ಲಿದ್ದ ಮುನಿರಾಜು ಮತ್ತು ರತ್ನಮ್ಮ ಎಂಬುವವರಿಗೆ ತೀವ್ರ ಗಾಯವಾಗಿದ್ದು. ಶೇಕಡಾ 40ರಷ್ಟು ಸುಟ್ಟಗಾಯಗಳಾಗಿವೆ ಎಂದು ಮಾಹಿತಿ ದೊರೆತಿದೆ. ಇವರ ಜೊತೆಗೆ ಮನೆಯಲ್ಲಿದ್ದ ಮಗಳು ನೇತ್ರಾಗು ಗಾಯಾವಾಗಿದ್ದು. ಗಾಯಾಳೂಗಳನ್ನು ಕೋಲಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಮಾಹಿತಿ ದೊರೆತಿದೆ. ಸ್ಥಳಕ್ಕೆ ಕೋಲಾರಾ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

Exit mobile version