Site icon PowerTV

ಕೃಷ್ಣ ನದಿಯಲ್ಲಿ ಕಡಿಮೆಯಾದ ನೀರು: ಹೆಚ್ಚಾದ ಮೊಸಳೆಗಳ ಹಾವಳಿ !

ರಾಯಚೂರು: ಕೃಷ್ಣ ನದಿಯಲ್ಲಿ ನೀರು ಕಡಿಮೆಯಾದ ಹಿನ್ನಲೆ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು. ಹಗಲು ರಾತ್ರಿ  ನದಿ ದಡದಲ್ಲಿ, ರಸ್ತೆಯ ಮೇಲೆ ಮೊಸಳೆಗಳು ಓಡಾಡುವುದನ್ನು ನೋಡಿದ ಜನರು ಗಾಬರಿಯಾಗಿದ್ದಾರೆ.

ರಾಯಚೂರು ತಾಲೂಕಿನ ಗುರ್ಜಾಪುರ ಬ್ಯಾರೇಜ್ ಹಿನ್ನೀರಿನಲ್ಲಿ ಮೊಸಳೆ ಹಾವಳಿ ಹೆಚ್ಚಾಗಿದ್ದು. ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಾಗ್ತಿದ್ದಂತೆ ನಾನಾ ಅವಾಂತರಗಳು ಸೃಷ್ಟಿಯಾಗಿವೆ. ಹಗಲು ರಾತ್ರಿ ನದಿ ದಡ ಹಾಗೂ ರಸ್ತೆಗಳ ಮೇಲೆ‌‌ ಮೊಸಳೆ ಓಡಾಡುತ್ತಿದ್ದು ಬೃಹದಾಕಾರದ ಮೊಸಳೆ ಕಂಡು ಸ್ಥಳೀಯರು ಶಾಕ್​ ಆಗಿದ್ದಾರೆ. ರಾತ್ರಿ ಸಮಯದಲ್ಲಿ ಜನರು ಓಡಾಡಲು ಕೂಡ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದ್ದು. ಬ್ಯಾರೇಜ್​ನಲ್ಲಿ ಮೊಸಳೆಗಳ ಹಿಂಡೆ ಜಮೆಯಾಗಿವೆ ಎಂದು ಮಾಹಿತಿ ದೊರೆತಿದೆ.

Exit mobile version