Site icon PowerTV

60 ಅಡಿ ಬಾವಿಗೆ ಬಿದ್ದರು ಬದುಕಿ ಬಂದ ಅಜ್ಜಿ:ಕೊನೆ ಗಳಿಗೆಯಲ್ಲಿ ಮಾಡಿದ ಸಾಹಸ ಎಂಥದ್ದು ಗೊತ್ತೇ..!

ಚಿಕ್ಕಮಗಳೂರು : ಕಾಲು ಜಾರಿ 60 ಅಡಿ ಬಾವಿಗೆ ಬಿದ್ದ ಮುದುಕಿಯೊಬ್ಬಳು ಬದುಕಿ ಬಂದ ಘಟನೆ ಕೊಪ್ಪ ತಾಲೂಕಿನ ಮರಕಟ್ಟೆ ಗ್ರಾಮದಲ್ಲಿ ನಡೆದಿದ್ದು. ಒಂದು ಗಂಟೆಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ಮಾಡಿದ ಮುದುಕಿ ಕೊನೆಗು ಬದುಕಿ ಬಂದಿದ್ದಾಳೆ.

ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲೂಕು, ಮರಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದ್ದು. 94 ವರ್ಷದ ಕಮಲ ಎಂಬ ವೃದ್ದೆ ಕಾಲು ಜಾರಿ 60 ಅಡಿ ಬಾವಿಗೆ ಬಿದ್ದಿದ್ದರು. ಆದರೆ ಬಾವಿಯೊಳಗಿನ ನೀರಿನಲ್ಲಿ ಮುಳುಗದಂತೆ ನೀರಿನ ಪೈಪ್​ನ್ನು ಹಿಡಿದುಕೊಂಡಿದ್ದ ಕಮಲಮ್ಮ ಸಾಹಸ ಮಾಡಿದ್ದು, ಸುಮಾರು 1ಗಂಟೆಗು ಹೆಚ್ಚು ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿದರು.

ವೃದ್ದೆ ಬಾವಿಗೆ ಬಿದ್ದ ವಿಷಯವನ್ನು ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು. ವೃದ್ದೆಯನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದು. ಅಗ್ನಿಶಾಮಕ ಸಿಬ್ಬಂದಿ ವಿಶ್ವನಾಥ್​ ನೇತೃತ್ವದ ತಂಡ ವೃದ್ದೆಯನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳ ಕಾರ್ಯಕ್ಕೆ ಸ್ಥಳಿಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

 

Exit mobile version