Site icon PowerTV

ವಿಷಪೂರಿತ ಆಹಾರ ಸೇವನೆ: 20 ಕುರಿಗಳು ಸಾವು !

ಬಾಗಲಕೋಟೆ : ವಿಷಪೂರಿತ ಆಹಾರ ಸೇವಿಸಿ ಸುಮಾರು 20 ಕ್ಕು ಕುರಿಗಳು ಸಾವನ್ನಪ್ಪಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು. ಕುರಿಗಳನ್ನು ಕಳೆದುಕೊಂಡ ಕುರಿಗಾಹಿ ಮಹಿಳೆ ಕಣ್ಣೀರಿಟ್ಟಿದ್ದಾರೆ. ಸ್ಥಳೀಯ ಪಶು ವೈಧ್ಯಾಧಿಕಾರಿ ಉಳಿದ ನೂರಕ್ಕೂ ಹೆಚ್ಚು ಕುರಿಗಳಿಗೆ ಔಷದಿ ನೀಡಿ ರಕ್ಷಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಬಾಗಲಕೋಟೆ ಜಿಲ್ಲೆಯ, ಇಲಕಲ್ ತಾಲ್ಲೂಕಿನ, ತೊಂಡಿಹಾಳ ಗ್ರಾಮದಲ್ಲಿ ಘಟನೆ ನಡೆದಿದ್ದು. ಶೇಖಪ್ಪ ಸಂಗಪ್ಪ ಮೇಗಲಮನಿ ಎಂಬ ವ್ಯಕ್ತಿ ತನ್ನ ಸುಮಾರು 130 ಕ್ಕೂ ಹೆಚ್ಚು ಕುರಿಗಳನ್ನು ಮೇಯಲು ಕರೆದೊಯ್ದಿದ್ದ ಸಂಧರ್ಭದಲ್ಲಿ ಕುರಿಗಳು ವಿಷಪೂರಿತ ಆಹಾರವನ್ನು ಸೇವಿಸಿ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.

ವಿಷಪೂರಿತ ಆಹಾರವನ್ನು ಸೇವಿಸಿ ಸುಮಾರು 20 ಕುರಿಗಳು ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟಿದ್ದು. ಸ್ಥಳಕ್ಕೆ ಇಳಕಲ್​ ಪಶುವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ 100 ಕ್ಕೂ ಹೆಚ್ಚು ಕುರಿಗಳಿಗೆ ಔಷದ ನೀಡಿ ಉಳಿದ ಕುರಿಗಳನ್ನು ರಕ್ಷಿಸಿದ್ದು. ಕುರಿಗಾಯಿ ಶೇಖಪ್ಪನಿಗೆ ಸುಮಾರು 3 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಮಾಹಿತಿ ದೊರೆತಿದೆ.

Exit mobile version