Site icon PowerTV

ಪ್ರೀತಿ ಮಾಡಿದ ಜೋಡಿಗೆ ಮೈಬಣ್ಣವೆ ಮುಳುವಾಯಿತು !

ಹುಬ್ಬಳ್ಳಿ: ಒಂದೇ ಜಾತಿಯಲ್ಲ, ಹೆಚ್ಚು ಓದಿಲ್ಲ, ಒಳ್ಳೆ ಕೆಲಸವಿಲ್ಲ ಎಂದು ಹುಡುಗಿಯ ಮನೆಯವರು ಹುಡುಗನನ್ನು ನಿರಾಕರಿಸುವುದನ್ನು ನಾವು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಇಲ್ಲೊಂದು ಕುಟುಂಬ ಹುಡುಗ ಹೆಚ್ಚು ಬೆಳ್ಳಗಿದ್ದಾನೆ ಎಂಬ ಕಾರಣಕ್ಕೆ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದ್ದು. ಜೀವ ಬೆದರಿಕೆ ಎದುರಿಸುತ್ತಿರುವ ಯುವ ಜೋಡಿಗಳು ರಕ್ಷಣೆಗಾಗಿ ಪೋಲಿಸರ ಮೊರೆ ಹೋಗಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ಸೇರಿದ ಸೈಯದ್​ ಅನ್ವರ್​ ಮತ್ತು ರಹೀಮಾ ಕಳೆದ ಒಂದುವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ರಹೀಮಾ ಕುಟುಂಬಸ್ಥರು ಹುಡುಗನ ದೇಹ ಕೆಂಪು ಬಣ್ಣವಿರುವುದರಿಂದ ಇವರಿಬ್ಬರ ಪ್ರೀತಿಗೆ ವಿರೋಧ ಮಾಡುತ್ತಿದ್ದರು. ಕಳೆದ 6 ತಿಂಗಳ ಹಿಂದೆಯೂ ಹುಡುಗ ಸೈಯದ್​ ಮೇಲೆ ಯುವತಿಯ ಕುಟುಂಬಸ್ಥರು ಹಲ್ಲೆ ಮಾಡಿದ್ದರು.

ಆದರೆ ನೆನ್ನೆ(ನ.29)ರಂದು ಯುವಕ ಮತ್ತು ಯುವತಿ ವಿವಾಹವಾಗಿದ್ದು.  ಇವರಿಬ್ಬರ ವಿವಾಹಕ್ಕೆ ಮತ್ತೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯುವಕ ನೋಡೋಕೆ ಭಿನ್ನವಾಗಿ ಕಾಣುತ್ತಿದ್ದಾನೆ ಎಂಬ ಕಾರಣಕ್ಕೆ ಯುವತಿ ಮನೆಯವರು ಈ ಮದುವೆಗೆ ವಿರೋಧ ವ್ಯಕ್ತ ಪಡಿಸಿದ್ದು. ಯುವಕನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಾಹಿತಿ ದೊರೆತಿದೆ.

ಜೀವ ಬೆದರಿಕೆ ಹಾಕಿದ ಹಿನ್ನಲೆ ಎದರಿದ ಯುವ ಜೋಡಿಗಳು ಹುಬ್ಬಳ್ಳಿ ನಗರ ಕಮಿಷನರ್​ ಬಳಿ ಬಂದು ರಕ್ಷಣೆ ಕೋರಿದ್ದಾರೆ ಎಂದು ಮಾಹಿತಿ ದೊರೆತಿದೆ.

Exit mobile version