Site icon PowerTV

ಚುನಾವಣಾ ಆಯೋಗ ಮೋದಿ ಮನೆ ಮುಂದೆ ಕೂತಿರುವ ನಾಯಿ: ಕಾಂಗ್ರೆಸ್​ ನಾಯಕ

ಮುಂಬೈ: ಭಾರತದ ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಅವರ ಬಂಗಲೆಯ ಹೊರಗೆ ಕುಳಿತಿರುವ ನಾಯಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಭಾಯಿ ಜಗತಾಪ್ ಶುಕ್ರವಾರ ಬಣ್ಣಿಸಿದ್ದಾರೆ. ಇದರ ಕುರಿತು ಬಿಜೆಪಿ ನಾಯಕರು ಪೋಲಿಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಜಗತಾಪ್ ಅವರ ಹೇಳಿಕೆಯನ್ನು ಖಂಡಿಸಿದ ಬಿಜೆಪಿ ನಾಯಕರು,  ಕಾಂಗ್ರೆಸ್ ನಾಯಕ ಭಾಯಿ ಜಗತಾಪ್ ಚುನಾವಣಾ ಆಯೋಗವನ್ನು ನಾಯಿಗೆ ಹೋಲಿಸಿದ್ದಾರೆ, ಒಂದು ಸ್ವತಂತ್ರ್ಯ ಸಾಂವಿಧಾನಿಕ ಸಂಸ್ಥೆಯ ವಿರುದ್ದ ಇಂತಹ ಹೇಳಿಕೆ ನೀಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಭಾಯಿ ಜಗತಾಪ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ಕಿರೀಟ್ ಸೋಮಯ್ಯ ಚುನಾವಣಾ ಆಯೋಗ (ಇಸಿ) ಮತ್ತು ಮುಂಬೈ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಜಗತಾಪ್ ಅವರ ಹೇಳಿಕೆಯನ್ನು ಖಂಡಿಸಿದ ಅವರು ಚುನಾವಣಾ ಆಯೋಗದ ವಿರುದ್ದ ಈ ರೀತಿಯ ನಿಂದನೆ ಮತ್ತು ಅಗೌರವವನ್ನು ಸಹಿಸಲು ಸಾಧ್ಯವಿಲ್ಲ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೋಮಯ್ಯ ಆಗ್ರಹಿಸಿದ್ದಾರೆ. ಇದೀಗ ಜಗಪತ್​ ಹೇಳಿಕೆಗೆ ಎಲ್ಲಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಮಾಹಿತಿ ದೊರೆತಿದೆ.

 

Exit mobile version