Site icon PowerTV

ಆಕಾಂಕ್ಷಿ ಅಲ್ಲ ಆದ್ರೆ ಸಚಿವ ಸಂಪುಟದಲ್ಲಿ ಸ್ಥಾನ ಕೊಡ್ತಾರೆ : ಹೆಚ್.ಸಿ ಬಾಲಕೃಷ್ಣ

ರಾಮನಗರ: ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಆದರೆ ಕೊಡ್ತಾರೆ. 5 ಸಲ ಗೆದ್ದಿದ್ದೇನೆ, ಸೀನಿಯರ್​ ಎಂದು ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಅವರು ಶುಕ್ರವಾರ ಹೇಳಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರ ತಾಲ್ಲೂಕಿನ ಬಿಡದಿಯಲ್ಲಿ ಶಾಸಕ ಬಾಲಕೃಷ್ಣ ಅವರು, ನಾನು ಆಕಾಂಕ್ಷಿ ಅಲ್ಲ, ಕೊಡ್ತಾರೆ. ನಾನು ಕೂಡ ಸೀನಿಯರ್ ಎಷ್ಟು ಸಲ ಗೆದ್ದಿದ್ದೇನೆ. ಬೆಳಗ್ಗೆ ಎದ್ದು ಇದೇ ಕೆಲಸ ಏನ್ರೀ! ನಮಗೂ ಪ್ರಮೋಷನ್ ಬೇಕಲ್ವಾ? ಎಂದರು.

ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಬ್ಬರೂ ಕನ್ಸಿಡರ್ ಮಾಡ್ತಾರೆ ಎಂಬ ವಿಶ್ವಾಸವಿದೆ. ಯಾರಿಗೂ ಆಶ್ವಾಸನೆ ಕೊಡೋಲ್ಲ, ಅವರವರ ಕಾರ್ಯ ವೈಖರಿ ನೋಡಿ ಕೊಡ್ತಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ ಸಚಿವ ಸ್ಥಾನ ಮಿಸ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಬಾರಿಯ ಪರಿಸ್ಥಿತಿ ಬೇರೆ, ಈ ಬಾರಿಯ ಪರಿಸ್ಥಿತಿ ಬೇರೆ ಇದೆ‌. ನಾನು ಸೀನಿಯರ್ಸ್​ನಲ್ಲಿ ಸೀನಿಯರ್ ಇದ್ದೇನೆ. ಎಲ್ಲಾ ಮಾನದಂಡಗಳನ್ನು ಅನುಸರಿಸಬೇಕು ಅಲ್ವಾ? ಅವರೇನು ಎಳೆ ಮಕ್ಕಳೇನ್ರಿ, ಅವರಿಗೆ ಏನು ಅರ್ಥ ಆಗೋಲ್ವಾ? ಆಗಬೇಕಾದಾಗ ಮಾಡ್ತಾರೆ‌, ನಾಳೆನೇ ಮಾಡಿ ಅಂತಾ ಹೇಳೊಕಾಗುತ್ತಾ? ಹೈಕಮಾಂಡ್​ಗೆ ಬಿಟ್ಟ ನಿರ್ಧಾರ. ಅವರಿಗೂ ಆಸೆ ಆಕಾಂಕ್ಷೆ ಇದೆ. ಸೀನಿಯರ್ಸ್​​ನಾ ಯಾವ ರೀತಿ ಕನ್ಸಿಡರ್ ಮಾಡ್ತಾರೆ ನೀವೆ ಚರ್ಚೆ ಮಾಡಿ ಎಂದು ಶಾಸಕ ಹೆಚ್.ಡಿ ಬಾಲಕೃಷ್ಣ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Exit mobile version