Site icon PowerTV

ಆಗ ತಾನೇ ಜನಿಸಿದ ಮಗುವನ್ನು ಶೌಚಾಲಯದ ಕಮೋಡ್​ಗೆ ಹಾಕಿದ ದುರುಳರು

ರಾಮನಗರ : ನಗರದ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು. ಆಗ ತಾನೇ ಜನಿಸಿದ ನವಜಾತ ಶಿಶುವನ್ನು ಶೌಚಲಯದ ಕಮೋಡ್​​ಗೆ ಹಾಕಿ ಫ್ಲೆಶ್​ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶೌಚ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದು. ಪೋಲಿಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.

ರಾಮನಗರದ ಹಾರೋಹಳ್ಳಿ ಸಮೀಪದ ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು. ಆಗ ತಾನೇ ಜನಿಸಿದ ಮಗುವನ್ನು ಆಸ್ಪತ್ರೆಯ  ಟಾಯ್ಲೆಟ್​ ಕಮೋಡ್​ಗೆ ಹಾಕಿ ಫ್ಲೆಶ್​ ಮಾಡಿದ್ದಾರೆ. ಶೌಚಾಲಯದ ಪೈಪ್​ ಕಟ್ಟಿಕೊಂಡ ಕಾರಣ ಸ್ವಚ್ಚತಾ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು ಆಗ ಘಟನೆ ಬೆಳಕಿಗೆ ಬಂದಿದೆ. ಮಗುವಿನ ಜನನವನ್ನು ಮರೆಮಾಚಲು ಈ ಕೃತ್ಯವನ್ನು ಮಾಡಿದ್ದಾರೆ ಪೋಲಿಸರು ಶಂಕಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಹಾರೋಹಳ್ಳಿ ಪೋಲಿಸರು ತನಿಖೆಗೆ ಮುಂದಾಗಿದ್ದು. ಮಗುವಿನ ಡಿಎನ್​ಎ ವರದಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.

 

Exit mobile version