Site icon PowerTV

ಜೈಲಾಧೀಕಾರಿ ಹತ್ಯೆಗೆ ಸಂಚು : ಕಾರು ಬ್ಲಾಸ್ಟ್​ ಮಾಡುವುದಾಗಿ ಬೆದರಿಕೆ

ಕಲಬುರಗಿ : ಜಿಲ್ಲೆಯ ಕಾರಗೃಹ ಅಧಿಕ್ಷಕಿ ಡಾ. ಅನಿತಾ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಕರೆಗಳು ಬಂದಿದ್ದು. ಅನಾಮಧೇಯ ವ್ಯಕ್ತಿಯೊಬ್ಬ ಕಾರನ್ನು ಬ್ಲಾಸ್ಟ್​ ಮಾಡುವ ಮೂಲಕ ಡಾ. ಅನಿತಾರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಕಲಬುರಗಿ ನಗರ ಪೋಲಿಸ್​ ಇನ್ಸಪೇಕ್ಟರ್ ಮೊಬೈಲ್​ ಪೋನಿಗೆ ಬೆದರಿಕೆ ಕರೆಯ ಆಡಿಯೋ ಸಂದೇಶ ಬಂದಿದ್ದು. ಈ ಮಾಹಿತಿಯನ್ನು ಜೈಲಾಧಿಕಾರಿ ಅನಿತಾ ಅವರ ಗಮನಕ್ಕೆ ತಂದಿದ್ದಾರೆ. ಬೆದರಿಕೆ ಸಂದೇಶ ಬಂದಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜೈಲಾಧಿಕಾರಿ ಅನಿತಾ ಇದರ ಬಗ್ಗೆ ಎಚ್ಚರಿಕೆ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೆದರಿಕೆ ಸಂದೇಶ ಬಂದ ಹಿನ್ನಲೆಯಲ್ಲಿ ಎಚ್ಚರಿಕೆ ವಹಿಸಿರುವ ಜೈಲಾಧಿಕಾರಿ ತಮ್ಮ ಕಾರನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ಪಾರ್ಕ್​ ಮಾಡುವಂತೆ ತಮ್ಮ ಚಾಲಕನಿಗೆ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ದೊರೆತಿದೆ.

ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೆ ಕಲಬುರಗಿ ಜೈಲಿಗೆ ವರ್ಗಾವಣೆಯಾಗಿ ಬಂದಿದ್ದ ಡಾ ಅನೀತಾ. ಸೆಂಟ್ರಲ್​ ಜೈಲಿನಲ್ಲಿ ನಡೆಯುತ್ತಿದ್ದ ಹೈಫೈ ಜೀವನಕ್ಕೆ ಬ್ರೇಕ್ ಹಾಕಿದ್ದರು. ಇದರಿಂದಾಗಿ ಜೈಲಿನಲ್ಲಿನ ಕೈದಿಗಳು ಇವರ ಮೇಲೆ ಸಿಟ್ಟಾಗಿದ್ದರು, ಇದೇ ಕಾರಣಕ್ಕೆ ಜೈಲಾಧಿಕಾರಿಗೆ ಬೆದರಿಕೆ ಹಾಕಲು ಯತ್ನಿಸಿದ್ದಾರೆ ಎಂದು ಶಂಕಿಸಲಾಗಿದೆ.

Exit mobile version