Site icon PowerTV

ಸಿದ್ದರಾಮಯ್ಯ ತಪ್ಪು ಸಾಬೀತಾದರೆ ನಾನು ಜೀತಾ ಮಾಡ್ತೇನೆ : ಕೆ.ಎಂ ಶಿವಲಿಂಗೇಗೌಡ

ಬೆಂಗಳೂರು: ನಗರದಲ್ಲಿ ಮಾತನಾಡಿದ ಮಾಜಿ ಶಾಸಕ ಶಿವಲಿಂಗೇಗೌಡ, ಮೂಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರದ್ದು ಯಾವುದೇ ತಪ್ಪಿಲ್ಲ. ಸುಮ್ಮನೆ ಬಿಜೆಪಿಯವರು ಅವರ ಮೇಲೆ ಕೇಸ್​ ದಾಖಲು ಮಾಡಿದ್ದಾರೆ. ಮೂಡಾದವರು ಸೈಟ್​ ಕೊಟ್ಟಿದ್ದಾರೆ, ಸಿದ್ದರಾಮಯ್ಯನವರು ತೆಗೆದುಕೊಂಡಿದ್ದಾರೆ ಅದರಲ್ಲಿ ಯಾವುದೇ ತಪ್ಪಿಲ್ಲ, ಒಂದು ವೇಳೆ ಸಿದ್ದರಾಮಯ್ಯನ ಮೇಲೆ ಆರೋಪ ಸಾಬೀತಾದರೆ ನಾನು ಜೀತಾ ಮಾಡುತ್ತೇನೆ ಎಂದು ಹೇಳಿದರು.

ಸಿಎಂ ಕುಟುಂಬದ ಮೇಲೆ ಕೇಸ್ ವಿಚಾರವಾಗಿ ಮಾತನಾಡಿದ ಶಿವಲಿಂಗೇಗೌಡ ‘ದೇವರಾಜ ಎನ್ನುವವರು ಸಿದ್ದರಾಮಯ್ಯನವರ ಬಾಮೈದಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯನ ಬಾಮೈದ ಅವರ ತಂಗಿಗೆ ಕೊಟ್ಟಿದ್ದಾರೆ.
ಏನಾದರೂ ಮೋಸ ಮಾಡಿದ್ರೆ ದೇವರಾಜು ಮೇಲೆ ಕೇಸ್​​ ಹಾಕ್ಬೇಕು. ಆದರೆ ಇಲ್ಲಿ ಸಿದ್ದರಾಮಯ್ಯನ ಮೇಲೆ ಕೇಸ್​ ದಾಖಲು ಮಾಡಿದ್ದಾರೆ.  ಈ ದೂರನ್ನು ಅದೇಗೆ ದಾಖಲಿಸಿಕೊಂಡಿದರೋ’ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಶಾಸಕ ಶಿವಲಿಂಗೇಗೌಡ ‘ಸಿದ್ದರಾಮಯ್ಯನವರು ಮೋಸ ಮಾಡಿದ್ದಾರೆ ಎಂದು ಸಾಬೀತಾದರೆ ನಾವು ಜೀತಾ ಮಾಡ್ತೇನೆ, ಮೂಡಾದವರು ಸೈಟ್ ಕೊಟ್ಟಿರೋದು ಅವರ ಮೇಲೆ ಯಾರು ಮಾತಾಡ್ತಿಲ್ಲ, ಮೂಡಾ  ಸೈಟು ಕೊಟ್ಟಾಗ ಬಿಜೆಪಿಯವರು ಅಧ್ಯಕ್ಷರಾಗಿದ್ದರು. ಅವಾಗ ಅದರ ಬಗ್ಗೆ ಗಮನ ಇಟ್ಟುಕೊಳ್ಳಬೇಕಾಲ್ಲವ ಎಂದು ಹೇಳಿದರು.

ವಕ್ಫ್​ ವಿಚಾರವಾಗಿ ಮಾತನಾಡಿದ ಶಾಸಕ ‘ ವಕ್ಪ್ ನೀಜಾಮರ ಕಾಲದಿಂದ ಇದೆ. ಇದರ ಬಗ್ಗೆ ಸಿಎಂ ರೈತರನ್ನು ಒಕ್ಕಲೆಬ್ಬಿಸಲ್ಲ ಎಂದು ಹೇಳಿದ್ದಾರೆ.  ಹೀಗಿದ್ದರೂ ಕೂಡ ಬಿಜೆಪಿಯವರು ಯಾಕೆ ತಮಟೆ ಬಡೆದುಕೊಳ್ತಿದ್ದಾರೆ ಗೊತ್ತಿಲ್ಲ. ಒಂದು ಸಮಾಜದ ಮೇಲೆ ಕೆಟ್ಟ ಹೆಸರು ತರಲು ಬಿಜೆಪಿ ಈ ಗಿಮಿಕ್ ಮಾಡುತ್ತಿದೆ. ಬಿಜೆಪಿಯವರು 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿದರು. ಅದರ ಬಗ್ಗೆ ಮಾತನಾಡಲು ಅವರು ಒಪ್ಪಿಕೊಳ್ಳೊದಿಲ್ಲ’ ಎಂದು ಹೇಳಿದರು.

ಕ್ಯಾಬಿನೆಟ್​ ವಿಸ್ತರಣೆ ಬಗ್ಗೆ ಶಿವಲಿಂಗೇಗೌಡ ಮಾತು !

ಕ್ಯಾಬಿನೆಟ್ ವಿಸ್ತರಣೆ ಮಾಡೋದು ಬಿಡೋದು ಹೈ ಕಮಾಂಡ್‌ಗೆ ಬಿಟ್ಟಿದ್ದು ಎಂದ ಶಿವಲಿಂಗೇ ಗೌಡ, ನನಗೂ ಸಚಿವ ಸ್ಥಾನ ಕೊಟ್ಟರೆ ನಾನು ಬಿಡೊಲ್ಲ. ಆದರೆ ಸಚಿವ ಸ್ಥಾನ ಕೊಡೊದು ಬಿಡೊದು ಹೈಕಮಾಂಡ್​ ತೀರ್ಮಾನ. ಸಚಿವ ಸ್ಥಾನದ ಬಗ್ಗೆ ಡಿ,ಕೆ ಶಿವಕುಮಾರ್​ ಮತ್ತು ಸುರ್ಜೇವಾಲ ಭರವಸೆ ನೀಡಿದ್ದಾರೆ. ನೋಡೊಣ ಏನಾಗುತ್ತೆ ಎಂದು ಹೇಳಿದರು.

Exit mobile version