Site icon PowerTV

‘ಫೆಂಗಲ್’ ಚಂಡಮಾರುತ ಭೀತಿ: ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ

ಚೆನೈ : ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರೂಪುಗೊಂಡಿರುವ ‘ಫೆಂಗಲ್’ ಚಂಡಮಾರುತ ಮುಂದಿನ 12 ಗಂಟೆಗಳಲ್ಲಿ ಕರಾವಳಿಗೆ ಅಪ್ಪಳಿಸಲಿದೆ ಎಂದು ಇಲ್ಲಿನ ಪ್ರಾದೇಶಿಕ ಹವಾಮಾನ ಕೇಂದ್ರ ಗುರುವಾರ ತಿಳಿಸಿದೆ.

ನವೆಂಬರ್ 30ರಂದು ಈ ಚಂಡಮಾರುತ ಗಂಟೆಗೆ 60-70 ಕೀ.ಮೀ ವೇಗದಲ್ಲಿ ಕರೈಕಲ್-ಮಹಾಬಲಿಪುರಂ ದಾಟಿ ಶ್ರೀಲಂಕಾ ಕರಾವಳಿ ಅಪ್ಪಳಿಸಲಿದೆ ಎಂದು ಹವಾಮಾನ ಕೇಂದ್ರ ಹೇಳಿದೆ. ಸದ್ಯ ಸ್ಥಿರಗೊಂಡಿರುವ ಈ ಚಂಡಮಾರುತದ ಪರಿಣಾಮ ಚೆನ್ನೈ ಕರಾವಳಿ, ಪುದುಚೇರಿ, ನಾಗಪಟ್ಟಣಂ, ಕರೈಕಲ್, ಮಹಾಬಲಿಪುರಂ ಸೇರಿದಂತೆ ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಮಳೆ ಸುರಿಯಲಿದೆ ಎಂದು ಮಾಹಿತಿ ದೊರೆತಿದೆ.

ಮುನ್ನೆಚರಿಕೆ ಕ್ರಮವಾಗಿ ತಮಿಳುನಾಡು ಸರ್ಕಾರ ಎನ್‌ಡಿಆರ್‌ಎಫ್ (NDRF) ತಂಡಗಳನ್ನು ನಿಯೋಜಿಸಲಾಗಿದ್ದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

Exit mobile version