Site icon PowerTV

ಬ್ರಿಡ್ಜ್​ ಮೇಲಿಂದ ಬಿದ್ದ ಕಾರು : ಮೂವರು ಸ್ಥಳದಲ್ಲೆ ಸಾ*ವು

ಚಿಕ್ಕೋಡಿ : ಅಂಕಲಿ ಬ್ರಿಡ್ಜ್ ಮೇಲಿಂದ ಕಾರು ಬಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ದೊರೆತಿದೆ. ಸ್ಥಳಕ್ಕೆ ಜೈಸಿಂಗ್​ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನೆರೆಯ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರ ಜಿಲ್ಲೆಯ ಶಿರೋಳ ತಾಲ್ಲೂಕಿನ ಸಾಂಗ್ಲಿ-ಕೊಲ್ಹಾಪುರ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು. ಕೃಷ್ಣಾ ನದಿಯ ಅಂಕಲಿ ಸೇತುವೆಯ ಮೇಲಿಂದ ಕಾರು ಬಿದ್ದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 3 ಜನ ಸಾವನ್ನಪ್ಪಿದ್ದು ಉಳಿದ ಮೂರು ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೃತರನ್ನು ಸಾಂಗ್ಲಿಯ ನಿವಾಸಿಗಳಾದ ಪ್ರಸಾದ್ ಭಾಲಚಂದ್ರ ಖೇಡೇಕರ್ (35),. ಪತ್ನಿ ಪ್ರೇರಣಾ ಪ್ರಸಾದ್ ಖೇಡೇಕರ್ ಮತ್ತು ವೈಷ್ಣವಿ ಸಂತೋಷ ನಾರ್ವೇಕರ್ (21 ವರ್ಷ) ಎಂದು ಗುರುತಿಸಲಾಗಿದೆ. ಸಮರ್ಜಿತ್ ಪ್ರಸಾದ್ ಖೇಡೇಕರ್, ವರದ್ ಸಂತೋಷ ನಾರ್ವೇಕರ್ ಮತ್ತು ಸಾಕ್ಷಿ ಸಂತೋಷ ನಾರ್ವೇಕರ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ. ಜೈಸಿಂಗ್​ಪುರ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.

Exit mobile version