Site icon PowerTV

ಪ್ರೇಯಸಿಯನ್ನು ಕೊಂದು 50 ತುಂಡು ಮಾಡಿದ ಕಟುಕ!

ರಾಂಚಿ: ಜಾರ್ಖಂಡ್​ನಲ್ಲಿ ಭೀಕರ ಕೊಲೆಯಾಗಿದ್ದು. ಪ್ರೀತಿಸಿದ ಯುವಕನೆ ತನ್ನ ಪ್ರೇಯಸಿಯನ್ನು ಕೊಲೆ ಮಾಡಿ. ಆಕೆಯ ದೇಹವನ್ನು 50 ತುಂಡುಗಳಾಗಿ ಮಾಡಿ ಬಿಸಾಡಿದ್ದಾನೆ ಎಂದು ತಿಳಿದು ಬಂದಿದೆ. ನರೇಶ್​​ ಭೇಂಗ್ರಾ ಎಂಬ ವ್ಯಕ್ತಿ ಗಂಗಿ ಕುಮಾರಿ ಎಂಬ ಮಹಿಳೆಯೊಂದಿಗೆ ಕಳೆದ ಕೆಲವು ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದರು, ಇತ್ತೀಚೆಗೆ ವೈಯಕ್ತಿಕ ವಿಷಯಕ್ಕೆ ಇವರಿಬ್ಬರ ನಡುವೆ ಮನಸ್ತಾಪ ಬಂದಿದ್ದು. ಯುವತಿಯ ಉಸಿರು ಕಟ್ಟಿಸಿ ಕೊಲೆ ಮಾಡಿ ದೇಹವನ್ನು ತುಂಡರಿಸಿದ್ದಾನೆ ಎಂದು ಮಾಹಿತಿ ದೊರೆತಿದೆ.

ಇತ್ತೀಚೆಗೆ ಇವರ ಮಧ್ಯ ಜಗಳವಾಗಿತ್ತು ಇದರಿಂದ ಬೇಸತ್ತಿದ್ದ ಬೇಂಗ್ರಾ ಯುವತಿಯನ್ನು ಮನೆಯ ಸಮೀಪವಿರುವ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅವಳ ದುಪಟ್ಟಾದಿಂದಲೆ ಕತ್ತು ಬಿಗಿದು ಕೊಲೆ ಮಾಡಿದ್ದನು. ನಂತರ ಆಕೆಯ ದೇಹವನ್ನು ಸುಮಾರು 50 ತುಂಡುಗಳಾಗಿ ಕತ್ತರಿಸಿ ಕಾಡು ಪ್ರಾಣಿಗಳಿಗೆ ಎಸೆದಿದ್ದಾನೆ.

ಆದರೆ ನವೆಂಬರ್​ 24 ರಂದು ನಾಯಿಯೊಂದು ಮನುಷ್ಯದ ದೇಹದ ಮಾಂಸವನ್ನು ಕಚ್ಚಿಕೊಂಡು ಓಡಾಡುತ್ತಿದ್ದನು ಗಮನಿಸಿದ ಪೋಲಿಸರು ಕಾಡಿನಲ್ಲಿ ಹುಡುಕಾಟ ನಡೆಸಿದ್ದು. ಪೋಲಿಸರಿಗೆ ಗಂಗಿಯ ದೇಹದ ಭಾಗಗಳು ದೊರೆತಿವೆ.

ಇದರೊಂದಿಗೆ ಕಾಡಿನಲ್ಲಿ ಚೀಲವೊಂದು ದೊರೆತಿದ್ದು. ಆ ಚೀಲದಲ್ಲಿ ಮೃತ ಪಟ್ಟ ಯುವತಿಯ ಆಧಾರ್​ ಕಾರ್ಡ್​ ಸೇರಿದಂತೆ ಆಕೆಗೆ ಸೇರಿದ ಕೆಲವು ವಸ್ತುಗಳು ದೊರೆತಿವೆ ಅವುಗಳನ್ನು ಮೃತ ಪಟ್ಟ ಯುವತಿಯ ತಾಯಿ ಗುರುತಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಕೊಲೆ ಆರೋಪಿ ನರೇಶ್​ನನ್ನು ಪೋಲಿಸರು ವಶಕ್ಕೆ ಪಡೆದಿದ್ದು. ಕೊಲೆ ಮಾಡಲು ಬಳಸಿದ ಕುಡುಗೋಲು ಸೇರಿದಂತೆ ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ದೊರೆತಿದೆ.

Exit mobile version