Site icon PowerTV

ಎಣ್ಣೆ ವಿಚಾರಕ್ಕೆ ಜಗಳ : ಕೊಲೆಯಲ್ಲಿ ಅಂತ್ಯ

ಮೈಸೂರು: ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೆ ಕೊಲೆ ಮಾಡಿದ ಘಟನೆ ನಂಜನಗೂಡಿನ ರೈಲ್ವೆ ಫ್ಲೈ ಓವರ್​ ಸರ್ವೀಸ್​ ರಸ್ತೆಯಲ್ಲಿ ನಡೆದಿದ್ದು. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬೀಕರವಾಗಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಚಾಮಲಾಪುರದ ಹುಂಡಿ ಗ್ರಾಮದ ಮಾದೇಶ (55) ಎಂಬ ವ್ಯಕ್ತಿ ಕೊಲೆಯಾದ ದುರ್ದೈವಿಯಾಗಿದ್ದು. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಾದೇಶ ನೆನ್ನೆ ಮಧ್ಯಾಹ್ನ ತನ್ನ ಮೂವರು ಸ್ನೇಹಿತರೊಂದಿಗೆ ಮಧ್ಯ ಪಾನ ಮಾಡಲು ತೆರಳಿದ್ದನು. ನಂಜನಗೂಡಿನ ಫ್ಲೈಓವರ್​ನಲ್ಲಿ ಮದ್ಯಪಾನ ಮಾಡುತ್ತಿದ್ದ ವೇಳೆ ಎಣ್ಣೆಯ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳವಾಗಿದ್ದು. ಜಗಳ  ವಿಕೋಪಕ್ಕೆ ಹೋಗಿ ಕೊಲೆಯಾಗಿದೆ ಎಂದು ಮಾಹಿತಿ ದೊರೆತಿದೆ.

ಕೊಲೆಯಾದ ಮಾದೇಶನ ಮಗ ರಾಜು ದೂರು ನೀಡಿದ್ದು. ದುಷ್ಕರ್ಮಿಗಳು ನನ್ನ ತಂದೆಯನ್ನು ಟವೆಲ್​ನಿಂದ ಕುತ್ತಿಗೆ ಬಿಗಿದು, ಆಯುಧದಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾನೆ, ಕೊಲೆಯಾದ ಸ್ಥಳಕ್ಕೆ ಪಟ್ಟಣ ಫೋಲಿಸ್​ ಠಾಣೆಯ  ಇನ್ಸ್​ಪೆಕ್ಟರ್​ ಸುನಿಲ್​ ಕುಮಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮಾಹಿತಿ ದೊರೆತಿದೆ.

 

Exit mobile version