Site icon PowerTV

ಅಂಬೇಡ್ಕರ್​ ಕನಸನ್ನು ಮೋದಿ ನನಸು ಮಾಡಿದ್ದಾರೆ : ಯತ್ನಾಳ್​

ಕಲಬುರಗಿ : ವಕ್ಫ್ ವಿರುದ್ದ ಕಲಬುರಗಿಯಲ್ಲಿ ಯತ್ನಾಳ & ಟೀಂ ಹೋರಾಟ ನಡೆಸಿದ್ದು. ಜಿಲ್ಲೆಯ ಡಿಸಿ ಕಛೇರಿ ಮುಂದೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಬಸವನಗೌಡ ಪಾಟೀಲ್ ಯತ್ನಾಳ ಭಾಷಣ ಮಾಡಿದ್ದು. ಸಂವಿಧಾನವನ್ನು ಉಳಿಸುವ ಕೆಲಸ ಕೇವಲ ಮೋದಿ ಮಾಡುತ್ತಿದ್ದಾರೆ. ಅಂಬೆಡ್ಕರ್​ ಕನಸನ್ನು ನನಸು ಮಾಡುತ್ತಿದ್ದಾರೆ ಎಂದು ಹೇಳಿದರು.

ವಕ್ಫ್​ ವಿಚಾರಾವಾಗಿ ಹೋರಾಟ ಮಾಡಬೇಡಿ ಎಂದು ನಮಗೆ ಹೇಳುವ ನೈತಿಕ ಹಕ್ಕು ಯಾರಿಗು ಇಲ್ಲ. ನಾವು ಭಾರತವನ್ನು ಉಳಿಸಲು, ಮಠ ಮಂದಿರಗಳನ್ನ, ರೈತರನ್ನು ಉಳಿಸಲು ಹೋರಾಟ ಮಾಡುತ್ತಿದ್ದೇವೆ
ಯಾರೂ ಮುಖ್ಯಮಂತ್ರಿ ಆಗಬೇಕೆಂದು ಹೋರಾಟ ಮಾಡುತ್ತಿಲ್ಲ. ನಾವ್ಯಾರು ರಾಜ್ಯಧ್ಯಕ್ಷನಾಗಲು ಹೋರಾಟ ಮಾಡುತ್ತಿಲ್ಲ’ ಎಂದು ಪರೋಕ್ಷವಾಗಿ ವಿಜಯೇಂದ್ರನಿಗೆ ಟಾಂಗ್​ ನೀಡಿದರು.

ಮುಂದುವರಿದು ಮಾತನಾಡಿದ ಯತ್ನಾಳ್​ ‘ನಮ್ಮ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲು ನಾವು ಯಾರನ್ನು ಬೈಯುತ್ತಿಲ್ಲ, ಯಾರನ್ನು ನಿಂದಿಸುತ್ತಿಲ್ಲ, ನಾವು ಸಹ ಮೆಚ್ಯೂರಿಟಿ ಪಾಲಿಟಿಕ್ಸ್​ ಮಾಡುತ್ತಿದ್ದೇವೆ. ಈಗ ನಾವು ಯಾರ ವಿರುದ್ದವು ಮಾತನಾಡುವುದಿಲ್ಲ. ನಮ್ಮ ಹೋರಾಟ ಕೇವಲ ವಕ್ಷ್​ ಆಗಿದೆ ಎಂದು ಹೇಳಿದರು.

ಸಂವಿಧಾನ ಉಳಿಸುತ್ತಿರೋದು ಮೋದಿ!

ಮೋದಿ ಕುರಿತು ಮಾತನಾಡಿದ ಯತ್ನಾಳ್​ ‘ಸಂವಿಧಾನ ಉಳಿಸುವ ಕೆಲಸವನ್ನು ಯಾರಾದ್ರು ಮಾಡುತ್ತಿದ್ದರೆ ಅದು ಕೇವಲ ಮೋದಿ ಮಾತ್ರ. ಆರ್ಟಿಕಲ್​ 370ನ್ನು ತೆಗೆದು ಅವರು ಅಂಬೆಡ್ಕರ್​ ಕನಸನ್ನು ನನಸು ಮಾಡಿದ್ದಾರೆ. ಆದ್ದರಿಂದ ನಾವು ಮೋದಿ ಜೊತೆ ನಿಂತುಕೊಂಡಿದ್ದೇವೆ.

ಆದರೆ ನಾವು ಇಲ್ಲಿ ಹೋರಾಟ ಮಾಡುತ್ತಿದ್ದರೆ, ನಮ್ಮವರೆ ನಮಗೆ ಹೋರಾಟ ಮಾಡುತ್ತಿದ್ದಾರೆ. ಆದರೆ ಈ ಹೋರಾಟದಲ್ಲಿ ಯಾವುದೇ ಸ್ವಾರ್ಥವಿಲ್ಲ. ನಾವು ಕೇವಲ ವಕ್ಫ್​ ವಿರುದ್ದ ಹೋರಾಟ ಮಾಡುತ್ತಿದ್ದೇವೆ. ನಾವು ಕೇವಲ ನಮ್ಮ ಭವಿಷ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಈ ಹೋರಾಟದ ಫಲವಾಗಿ ಮುಂದೆ ನಮ್ಮ ಪಕ್ಷದವರೆ ಈ ರಾಜ್ಯದ ಮುಖ್ಯಮಂತ್ರಿಯಾಗೋದು ಗ್ಯಾರಂಟಿ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಯತ್ನಾಳ್​ ‘ ನಾವು ಹೋರಾಟ ಮಾಡಿದಕ್ಕೆ ಇವತ್ತು ಮೋದಿ ಕೂಡ ಸಂವಿಧಾನದಲ್ಲಿ ಎಲ್ಲಿಯೂ ವಕ್ಫ್ ಎಂದು ಬರೆದಿಲ್ಲ ಎಂದು ಹೇಳಿದ್ದಾರೆ. ನಾವು ಸಹ ಇಲ್ಲಿ ವಕ್ಫ್​ ವಿರುದ್ದ ಹೋರಾಟ ಮಾಡಿದ ನಂತರ ದೆಹಲಿಗೆ ಹೋಗುತ್ತೇವೆ ಎಂದು ಹೇಳಿದರು.

Exit mobile version