Site icon PowerTV

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : 2 ದಿನ ಮಳೆ ಸಾಧ್ಯತೆ

ಬೆಂಗಳೂರು: ಬಂಗಾಳ ಕೊಲ್ಲಿಯ  ಉಪ ಮಹಸಾಗರದಲ್ಲಿ ವಾಯುಭಾರ ಕುಸಿತ ಹಿನ್ನಲೆ ಎರಡು ದಿನಗಳ ಕಾಲ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ದೊರೆತಿದ್ದು. ಹವಮಾನ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ.

ವಾಯುಭಾರ ಕುಸಿತದ ಪರಿಣಾಮದಿಂದ ಬೆಂಗಳೂರು ಸೇರಿದಂತೆ ಹಲವೆಡೆ ಕನಿಷ್ಟ ಉಷ್ಣಾಂಶ ಕಡಿಮೆಯಾಗಿದ್ದು. ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತವರಣವಿದೆ. ಇಂದು ಮತ್ತು ನಾಳೆ ಮಳೆಯಾಗುವ ಮುನ್ಸೂಚನೆ ಇದ್ದು. ರಾಮನಗರ, ಮಂಡ್ಯ,ಬೆಂಗಳೂರು,ಕೋಲಾರ, ಚಿಕ್ಕಬಳ್ಳಾಪುರ,
ಮೈಸೂರು, ತುಮಕೂರು, ಕೊಡಗು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಮಾನ ಇಲಾಖೇ ಎಚ್ಚರಿಕೆ ನೀಡಿದೆ.

ಮುಂದಿನ ದಿನಗಳಲ್ಲಿ ವಾಯುಭಾರ ತೀವ್ರಗೊಂಡು ಸೈಕ್ಲೋನ್ ಆಗುವ ಸಾಧ್ಯತೆ ಇದ್ದು ಮಳೆ ಮತ್ತು ಚಳಿಯ ಪ್ರಮಾಣ ತೀವ್ರವಾಗುವ ಸಾಧ್ಯತೆ ಇದೆ ಎಂದು ಮಾಹಿತಿ ದೊರೆತಿದೆ.

Exit mobile version