Site icon PowerTV

ಪ್ರಿಯಕರನಿಂದಲೆ ಪ್ರೇಯಸಿಯ ಕೊ*ಲೆ :ಕೊಲೆ ಮಾಡಿ ಇಡೀ ದಿನ ಶವದೊಂದಿಗೆ ಕಾಲ ಕಳೆದ ಸೈಕೋ

ಬೆಂಗಳೂರು : ನಗರದ ದಿ ರಾಯಲ್​​ ಲಿವಿನ್ಸ್​​ ಸರ್ವೀಸ್​ ಅರ್ಪಾಟ್​ಮೆಂಟ್​ನಲ್ಲಿ ಕೊಲೆಯಾಗಿದ್ದು. ಪ್ರಿಯಕರನಿಂದಲೆ ಪ್ರೇಯಸಿಯ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಕೊಲೆಯಾದ ಯುವತಿಯನ್ನು ಅಸ್ಸಾಂ ಮೂಲದ ಮಾಯಾಬ ಗೊಗಾಯ್ ಎಂದು ಗುರುತಿಸಿದ್ದು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಮಾಹಿತಿ ದೊರೆತಿದೆ.

ಕೊಲೆ ಆರೋಪಿ ಆರವ್​ ಅನಾಯ್​ ಮತ್ತು ಮಾಯಾ ಗೋಗಾಯ್​ ನವೆಂವರ್ 23ರ ಮಧ್ಯಾಹ್ನ​ ಅಪಾರ್ಟಮೆಂಟ್​ಗೆ ಆಗಮಿಸಿದ್ದರು. ಇಬ್ಬರು ಒಟ್ಟಿಗೆ ಅಪಾರ್ಟಮೆಂಟ್​ಗೆ ಬಂದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೋಲಿಸರ ಅನುಮಾನದ ಪ್ರಕಾರ ನವೆಂಬರ್​ 24ರಂದೆ ಕೊಲೆಯಾಗಿದ್ದು. ಕೊಲೆ ಮಾಡಿದ ಬಳಿಕ ಆರೋಪಿ ಅರಾವ್​ ಅನಾಯ್​ ಇಡೀ ದಿನ ರೂಮಿನಲ್ಲಿಯೆ ಕಾಲ ಕಳೆದಿದ್ದು. ಅಲ್ಲಿಯೆ ಕುಳಿತು ಸಿಗರೇಟ್​​ ಸೇದಿದ್ದಾನೆ ಎಂದು ಮಾಹಿತಿ ದೊರೆತಿದೆ.

ಕೊಲೆಯಾದ ಬಳಿಕ ಆರೋಪಿ ಇಡೀ ದಿನ ಶವದ ಜೊತೆ ಸಮಯ ಕಳೆದಿದ್ದು. ಇಂದು(ನ.26) ಬೆಳಿಗ್ಗೆ ಕ್ಯಾಬ್​ ಮಾಡಿಕೊಂಡು ಪರಾರಿಯಾಗಿದ್ದಾನೆ. ಕೊಲೆಯಾದ ರೀತಿಯನ್ನು ಗಮನಿಸಿದ ಪೋಲಿಸರು ಆರೋಪಿಯು ಮೃತದೇಹವನ್ನು ಪೀಸ್​ ಪೀಸ್​ ಮಾಡಬೇಕು ಎಂಬ ಯೋಜನೆ ರೂಪಿಸಿದ್ದು. ಅದು ಸಫಲವಾಗುವುದಿಲ್ಲ ಎಂದು ಅರಿತ ನಂತರ ಶವವನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಇಂದಿರಾನಗರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪತ್ತೆ ಹಚ್ಚಲು ಯೋಜನೆ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

Exit mobile version