Site icon PowerTV

2 ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಿದರೆ ಅಭಿವೃದ್ದಿಗೆ ಅನುದಾನ ಸಿಗುತ್ತೆ: ಕಾಂಗ್ರೆಸ್​ ಶಾಸಕ ಗವಿಯಪ್ಪ

ವಿಜಯನಗರ : ಕಾಂಗ್ರೆಸ್​ ಶಾಸಕ ಗವಿಯಪ್ಪ ಸ್ಪೋಟಕ ಹೇಳಿಕೆ ನೀಡಿದ್ದು. ಗ್ಯಾರಂಟಿ ಯೋಜನೆಗಳಿಂದಾಗಿ ಬಡವರಿಗೆ ಮನೆ ಕೊಡೊದಕ್ಕೆ ಆಗುತ್ತಿಲ್ಲ. ಆದ್ದರಿಂದ ಎರಡು ಗ್ಯಾರಂಟಿಗಳನ್ನು ರದ್ದು ಮಾಡಿದರೆ ಅಭಿವೃದ್ದಿಗೆ ಅನುದಾನ ಸರಿಯಾಗುತ್ತದೆ ಎಂದು ಹೇಳಿದರು.

ಹೊಸಪೇಟೆಯಲ್ಲಿ ನಡೆದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್​ ಶಾಸಕ ಗವಿಯಪ್ಪ ಗ್ಯಾರಂಟಿ ಯೋಜನೆಯ ಬಗ್ಗೆ ಅಸಮಧಾನ ಹೊರಹಾಕಿದ್ದು. ‘ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ದಿ ಯೋಜನೆಗಳು ಕುಂಠಿತವಾಗಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದಾಗಿ ಮನೆಗಳನ್ನು ಕೊಡೋದಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಶಕ್ತಿ ಯೋಜನೆ ಸೇರಿದಂತೆ ಎರಡು ಯೋಜನೆಗಳನ್ನು ಕಡಿಮೆ ಮಾಡೋಕೆ ಸಿಎಂಗೆ ಹೇಳ್ತಿನೀ, ನಂತರ ಅವರೇನು ತೀರ್ಮಾನಾ ಮಾಡ್ತಾರೋ ನೋಡೋಣ’ ಎಂದು ಹೇಳಿದರು.

 

Exit mobile version