Site icon PowerTV

ಜಾತಿ ನಿಂದನೆ ಪ್ರಕರಣದಲ್ಲಿ ಮುನಿರತ್ನನಿಗೆ ಬಿಗ್​ ಶಾಕ್​​ !

ಬೆಂಗಳೂರು : ಜಾತಿನಿಂದನೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಗೆ ಬಂದಿರುವ ಶಾಸಕ ಮುನಿರತ್ನನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು. ಜಾತಿನಿಂದನೆ ಪ್ರಕರಣದಲ್ಲಿ ವೇಲು ನಾಯಕ್​​ಗೆ ನಿಂದಿಸಿರುವುದು ಮುನಿರತ್ನನೆ ಎಂದು ಸಾಭೀತಾಗಿದೆ.

ವೇಲು ನಾಯಕ್​ಗೆ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಶಾಸಕ ಮುನಿರತ್ನನ ವಿರುದ್ದ ವೇಲು ನಾಯಕ್ ವೈಯಾಲಿ ಕಾವಲ್​​ ಪೋಲಿಸ್​ ಠಾಣೆ ಮೆಟ್ಟಿಲೇರಿದ್ದರು. ಸೆಪ್ಟೆಂಬರ್​ 13 ರಂದು ದೂರು ನೀಡಿದ್ದರು. ಇದರ ಆಧಾರದ ಮೇಲೆ ಸೆಪ್ಟಂಬರ್​ 14 ರಂದು ಕೋಲಾರದ ಬಳಿ ಮುನಿರತ್ನನನ್ನು ವಶಕ್ಕೆ ಪಡೆದಿದ್ದರು. ಶಾಸಕರು ನಿಂದಿಸಿದ್ದ ಮೊಬೈಲ್​ ಕರೆಯನ್ನು ರೆಕಾರ್ಡ್​ ಮಾಡಿಕೊಂಡಿದ್ದ ವೇಲು ನಾಯಕ್​ ಅದನ್ನು ಪ್ರಕರಣದ ಪ್ರಮುಖ ಸಾಕ್ಷಿಯಾಗಿ ನೀಡಿದ್ದರು.

ಆಡಿಯೋದ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ಪೋಲಿಸರು ಆಡಿಯೋದ ಮಾದರಿಯನ್ನು FSLಗೆ ಕಳುಹಿಸಿಕೊಟ್ಟಿದ್ದರು. ಇದರ ಕುರಿತು FSL ವರದಿ ಬಂದಿದ್ದು. ಆಡಿಯೋದಲ್ಲಿನ ಧ್ವನಿ ಮುನಿರತ್ನನದೆ ಎಂಬುದು ಸಾಭೀತಾಗಿದ್ದು. ಜಾತಿ ನಿಂದನೆ ಮತ್ತು ಜೀವಬೆದರಿಕೆ ಪ್ರಕರಣದಲ್ಲಿ ಮುನಿರತ್ನನಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಕೇವಲ ಜಾತಿನಿಂದನೆಯಲ್ಲದೆ ಮುನಿರತ್ನನ ವಿರುಧ್ದ ಮಹಿಳೆಯೊಬ್ಬರು ಕಗ್ಗಲೀಪುರ ಪೋಲಿಸ್​ ಠಾಣೆಯಲ್ಲಿ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದು. ಎರಡು ಪ್ರಕರಣವನ್ನು ರಾಜ್ಯಸರ್ಕಾರ SITಗೆ ನೀಡಿದೆ.

 

Exit mobile version