Site icon PowerTV

ಕಾಂತಾರ ಡ್ಯಾನ್ಸರ್ ಗಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿ: 6 ಜನರಿಗೆ ಗಂಭೀರ ಗಾಯ

ಉಡುಪಿ :ಕಾಂತರ ಡ್ಯಾನ್ಸರ್ ಗಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾಗಿ ಸುಮಾರು 6 ಜನರಿಗೆ ಗಂಭೀರ ಗಾಯವಾದ ಘಟನೆ ಉಡುಪಿಯಲ್ಲಿ ನಡೆದಿದ್ದು. ಗಾಯಾಳುಗಳನ್ನು ಕುಂದಾಪುರದ ಖಾಸಗಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ.

ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕೊಲ್ಲೂರು ಮಾರ್ಗದ ಮುಖಾಂತರ ತೆರಳುವಾಗ ಅಪಘಾತ ಸಂಭವಿಸಿದ್ದು.
25 ಜನ ಡ್ಯಾನ್ಸರ್ ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾಗಿ ಹಲವರಿಗೆ ಗಾಯವಾಗಿದೆ ಎಂದು ಮಾಹಿತಿ ದೊರೆತಿದೆ. 25 ಜನರಲ್ಲಿ ಸುಮಾರು 6 ಜನರಿಗೆ ಗಂಭೀರ ಗಾಯವಾಗಿದ್ದು ಕುಂದಾಪುರದ ಜಡ್ಕಲ್ ಮಹಾಲಕ್ಷ್ಮಿ ಕ್ಲಿನಿಕ್​ನಲ್ಲಿ ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಕಾಂತಾರ ಸಿನಿಮಾದ ಹಾಡಿನ ಚಿತ್ರೀಕರಣಕ್ಕೆ ಜೂನಿಯರ್​​ ಡ್ಯಾನ್ಸರ್​ಗಳು ಬಂದಿದ್ದರು. ಇನ್ನು 4 ದಿನದ ಚಿತ್ರೀಕರಣ ಬಾಕಿ ಇರುವಾಗಲೆ ಈ ದುರ್ಘಟನೆ ಸಂಭವಿಸಿದೆ.

ಅಪಘಾತ ಹಿನ್ನಲೆ ಚಾಲಕನ ಮೇಲೆ ಹಲ್ಲೆ ಮಾಡಿದ ಡ್ಯಾನ್ಸರ್​​ಗಳು

ವಾಹನ ಪಲ್ಟಿಯಾದ ಹಿನ್ನಲೆ ಚಿತ್ರೀಕರಣಕ್ಕೆ ಬಂದಿದ್ದ ಆರ್ಟ್​ ಹುಡುಗರು ವಾಹನ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು. ಚಾಲಕನ ನಿರ್ಲಕ್ಷದಿಂದ ಅಪಘಾತ ಸಂಭವಿಸಿದೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೆ ಒಳಗಾದ ಚಾಲಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಚಾಲಕನ ಮೇಲೆ ಹಲ್ಲೆಯನ್ನು ಖಂಡಿಸಿ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸಿದ್ದು. ಮಧ್ಯ ಪ್ರವೇಶಿದ ರಿಶಬ್​ ಶೆಟ್ಟಿ  ಸಂಧಾನ ಮಾಡುವುದಾಗಿ ಭರವಸೆ ನೀಡಿದ್ದು. ನಾಳೆ ಬೆಳಿಗ್ಗೆ ಕರೆದು ಬುದ್ದಿ ಹೇಳುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ ಎಂದು ಮಾಹಿತಿ ದೊರೆತಿದೆ.

 

Exit mobile version