Site icon PowerTV

ತುಮಕೂರಿನಲ್ಲಿ ಅಭಿಮಾನಿಗಳೊಂದಿಗೆ ಸಮಯ ಕಳೆದ ಶಿವಣ್ಣ ದಂಪತಿ

ತುಮಕೂರು : ಕನ್ನಡ ಚಿತ್ರರಂಗದ ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್ ತಮ್ಮ ಸರಳತೆಯ ಕಾರಣದಿಂದ ಅನೇಕ ಬಾರಿ ಸುದ್ದಿಯಲ್ಲಿರುತ್ತಾರೆ. ಇದೇ ಕಾರಣದಿಂದ ಅವರು ತಮ್ಮ ಅಭಿಮಾನಿಗಳಿಗು ಹೆಚ್ಚು ಇಷ್ಟವಾಗುತ್ತಾರೆ. ಅದೇ ರೀತಿ ಮತ್ತೊಂದು ಘಟನೆಯಾಗಿದ್ದು. ದಾವಣಗೆರೆಗೆ ತೆರಳುವ ಸಂಭರ್ಧದಲ್ಲಿ ತಮ್ಮ ಅಭಿಮಾನಿಗಳು ರಸ್ತೆ ಬದಿ ನಿಂತಿರುವುದನ್ನು ನೋಡಿದ ಶಿವಣ್ಣ ಮಾರ್ಗ ಮಧ್ಯೆ ತಮ್ಮ ಅಭಿಮಾನಿಗಳೊಂದಿಗೆ ಸಮಯ ಕಳೆದಿದ್ದಾರೆ.

ದಾವಣಗೆರೆ ಸಾಗುವ ಮಾರ್ಗ ಮಧ್ಯೆ ತುಮಕೂರಿನ ಶಿರಾ ತಾಲ್ಲೂಕಿನ ತಾವರೆಕೆರೆಯ ಬಳಿಯಲ್ಲಿ ಘಟನೆ ನಡೆದಿದ್ದು. ಅಭಿಮಾನಿಗಳು ರಸ್ತೆ ಬದಿಯಲ್ಲಿ ನಿಂತಿರುವುದನ್ನು ನೋಡಿ ಕಾರು ನಿಲ್ಲಿಸಿದ ಶಿವಣ್ಣ ತಮ್ಮ ಅಭಿಮಾನಿಗಳೊಂದಿಗೆ ಸಮಯ ಕಳೆದಿದ್ದಾರೆ. ಈ ವೇಳೆ ಶಿವರಾಜ್​ ಕುಮಾರ್​ ಅವರ ಧರ್ಮಪತ್ನಿ ಗೀತಾ ಶಿವರಾಜ್​ಕುಮಾರ್​ ಅವರು ಇದ್ದರು ಎಂದು ತಿಳಿದು ಬಂದಿದೆ.

 

Exit mobile version