Site icon PowerTV

IPL Auction: ಯಾರಿಗೂ ಬೇಡವಾದ ಕನ್ನಡಿಗ ಮಯಂಕ್, ನ್ಯೂಜಿಲೆಂಡ್‌ನ ವಿಲಿಯಮ್ಸನ್

ಜಿದ್ದಾ : ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ ಟೂರ್ನಿಯ 2ನೇ ದಿನದ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದ ಜೆದ್ದಾದಲ್ಲಿ ಸೋಮವಾರರ ನಡೆಯುತ್ತಿದೆ. ಹರಾಜು ಪ್ರಕ್ರಿಯೆಯ ಆರಂಭದಲ್ಲೇ ಬಿಡ್‌ಗೆ ಬಂದ, ನ್ಯೂಜಿಲೆಂಡ್‌ನ ಸ್ಟಾರ್ ಆಟಗಾರ ಕೇನ್ ವಿಲಿಯಮ್ಪನ್‌, ಭಾರತದ ಯುವ ಆಟಗಾರ ಪೃಥ್ವಿ ಶಾ, ಕನ್ನಡಿಗ ಮಯಂಕ್ ಅಗರವಾಲ್, ಅನುಭವಿಗಳಾದ ಅಜಿಂಕ್ಯ ರಹಾನೆ, ಶಾರ್ದೂಲ್ ಠಾಕೂ‌ರ್ ಅವರನ್ನು ಖರೀದಿಸಲು ಯಾವುದೇ ತಂಡ ಉತ್ಸಾಹ ತೋರಿಲ್ಲ. ಹೀಗಾಗಿ, ಇವರೆಲ್ಲ ಬಿಕರಿಯಾಗದೆ ಉಳಿದಿದ್ದಾರೆ.

ಪೃಥ್ವಿ ಶಾ – 75 ಲಕ್ಷ, ಮಯಂಕ- 1 ಕೋಟಿ, ರಹಾನೆ – 1.5 ಕೋಟಿ, ಠಾಕೂರ್ ಮತ್ತು ವಿಲಿಯಮ್ಪನ್ ತಲಾ 2 ಕೋಟಿ ಮೂಲ ಬೆಲೆ ಹೊಂದಿದ್ದರು. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ನಾಯಕತ್ವ ವಹಿಸಿದ್ದ ಫಾಫ್ ಡು ಪ್ಲೆಸಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸ್ 2 ಕೋಟಿ ನೀಡಿ ಖರೀದಿಸಿದೆ. ಮೊದಲ ದಿನದ ಹರಾಜಿನಲ್ಲಿ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಮತ್ತು ಕಳೆದ ಆವೃತ್ತಿಯಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್‌ಗೆ ಪ್ರಶಸ್ತಿ ಗೆದ್ದು ಕೊಟ್ಟಿದ್ದ ನಾಯಕ ಶ್ರೇಯಸ್ ಅಯ್ಯರ್ ಭಾರಿ ಮೊತ್ತ ಜೇಬಿಗಿಳಿಸಿದ್ದರು.

Exit mobile version