Site icon PowerTV

ಶೇಖ್ ಹಸೀನಾ ಮತ್ತು ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ

ಢಾಕಾ: ಶೇಖ್ ಹಸೀನಾ ನೇತೃತ್ವದ ಸರ್ಕಾರ ಹಾಗೂ ಅದಾನಿ ಕಂಪನಿಯ ಜತೆ ನಡೆದಿದ್ದ ಒಪ್ಪಂದ ಸರಿಯಾಗಿದೆಯೇ ಎಂದು ಪರಿಶೀಲನೆ ನಡೆಸಲು ಬಾಂಗ್ಲಾದ ಮಧ್ಯಂತರ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿದೆ.

2009ರಿಂದ 2024ರವರೆಗೆ ಬಾಂಗ್ಲಾದೇಶ ವಿವಿಧ ಕಂಪನಿಗಳ ಜತೆ ಮಾಡಿಕೊಂಡ ಒಪ್ಪಂದಗಳ ಬಗ್ಗೆ ಈ ಸಮಿತಿ ಪರಿಶೀಲನೆ ನಡೆಸಲಿದೆ ಎಂದು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮದ್ ಯೂನಸ್ ತಿಳಿಸಿದ್ದಾರೆ.ವಿದ್ಯುತ್ ಬಿಲ್ ಕಟ್ಟಿಲ್ಲ ಎಂಬ ಕಾರಣಕ್ಕೆ ಅದಾನಿ ಕಂಪನಿ ಇತ್ತೀಚೆಗೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿತ್ತು. ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆ ಮಾಡುವುದಕ್ಕಾಗಿಯೇ ಜಾರ್ಖಂಡ್‌ನ ಗೊಡ್ಡಾದಲ್ಲಿ ಉಷ್ಣ ವಿದ್ಯುತ್ ಸ್ಥಾವರವನ್ನು ಅದಾನಿ ಕಂಪನಿ ಸ್ಥಾಪಿಸಿದೆ.

ಏನಿದು ಅದಾನಿ ಮತ್ತು ಬಾಂಗ್ಲಾ ನಡುವಿನ ಒಪ್ಪಂದ 

ನವೆಂಬರ್ 2017 ರಲ್ಲಿ, ಅದಾನಿ ಪವರ್ (ಜಾರ್ಖಂಡ್) ಲಿಮಿಟೆಡ್ (APJL) ಬಾಂಗ್ಲಾದೇಶದೊಂದಿಗೆ  25 ವರ್ಷಗಳ ಕಾಲ ಪ್ರತಿ ವರ್ಷ 1,496 ಮೆಗಾ ವ್ಯಾಟ್​ (ನಿವ್ವಳ) ವಿದ್ಯುತ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿತು. ಇದರ ಅಡಿಯಲ್ಲಿ, ಬಾಂಗ್ಲಾದೇಶವು AJPL ನ ಗೊಡ್ಡಾ ಸ್ಥಾವರದಿಂದ ಉತ್ಪಾದಿಸುವ 100 ಪ್ರತಿಶತ ವಿದ್ಯುತ್ ಅನ್ನು ಖರೀದಿಸುತ್ತದೆ. 100 ಪ್ರತಿಶತದಷ್ಟು ಆಮದು ಮಾಡಿದ ಕಲ್ಲಿದ್ದಲಿನ ಮೇಲೆ ಕಾರ್ಯನಿರ್ವಹಿಸುವ ಘಟಕವನ್ನು ಮಾರ್ಚ್ 2019 ರಲ್ಲಿ ಭಾರತ ಸರ್ಕಾರವು ವಿಶೇಷ ಆರ್ಥಿಕ ವಲಯ ಎಂದು ಘೋಷಿಸಿತು.

ಆದರೆ ಬಾಂಗ್ಲಾದೇಶ ಖರೀದಿಸಿದ ವಿದ್ಯುತ್ತಿಗೆ ಹಣ ನೀಡದೆ ಇದ್ದ ಕಾರಣ ಅದಾನಿ ಸಂಸ್ಥೆ ಸರಿಯಾದ ಸಮಯಕ್ಕೆ ಹಣ ನೀಡದೆ ಇದ್ದರೆ ವಿದ್ಯುತ್ತ ರಫ್ತನ್ನು ನಿಲ್ಲಿಸುವುದಾಗಿ ವಾರ್ನಿಂಗ್​ ನೀಡಿದ್ದರು. ಇದರ ಕುರಿತಾಗಿ ಈಗ ಮೊಹಮ್ಮದ ಯೂನಿಸ್​ ನೇತೃತ್ವದ ಬಾಂಗ್ಲಾ ಸರ್ಕಾರ ತನಿಖೆ ನಡೆಸಲು ಮುಂದಾಗಿದೆ.

Exit mobile version