Site icon PowerTV

ನಿಖಿಲ್ ಸೋಲಿನಿಂದ ಬೇಸರಗೊಂಡ​ ಅಭಿಮಾನಿಯಿಂದ ಆತ್ಮಹತ್ಯೆಗೆ ಯತ್ನ

ರಾಮನಗರ : ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ಹೊರಬಂದಿದ್ದು. ಜೆಡಿಎಸ್​ ಅಭ್ಯರ್ಥಿ ನಿಖಿಲ್​ಕುಮಾರಸ್ವಾಮಿ ಮೂರನೇ ಭಾರಿಗೆ ಚುನಾವಣೆ ಸೋತಿದ್ದಾರೆ. ನಿಖಿಲ್​ ಸೋಲಿನಿಂದ ಬೇಸರಗೊಂಡ ನಿಖಿಲ್​ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಮಾಹಿತಿ ದೊರೆತಿದ್ದು. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಮಂಡ್ಯದ ಮಂಜುನಾಥ್​ ಎಂದು ಗುರುತಿಸಲಾಗಿದೆ.

ನಿಖಿಲ್​ ಕುಮಾರಸ್ವಾಮಿ ತಮ್ಮ ರಾಜಕೀಯ ಜೀವನದಲ್ಲಿ ಮೂರನೇ ಬಾರಿಗೆ ಸೋಲನುಭವಿಸಿದ್ದು. ಸತತವಾಗಿ 3ನೇ ಬಾರಿಗೆ ಸೋಲು ಕಂಡಿದ್ದಾರೆ. ಇದರಿಂದ ಬೇಸರಗೊಂಡ ನಿಖಿಲ್ ಅಭಿಮಾನಿ ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಿದ್ದು. ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸದ್ಯ ಅಸ್ವಸ್ತಗೊಂಡ ಮಂಜುನಾಥ್​ನನ್ನು ಚಿಕಿತ್ಸೆಗಾಗಿ ಮಂಡ್ಯದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ದೊರೆತಿದೆ. ಇಂದು ಮಧ್ಯಾಹ್ನ ನಿಖಿಲ್​ ಕುಮಾರಸ್ವಾಮಿ ಚನ್ನಪಟ್ಟಣ ತಾಲ್ಲೂಕಿನ, ಶ್ರೀರಾಂಪುರ ಗ್ರಾಮದಲ್ಲಿರುವ ಮಂಜುನಾಥ್​ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತೇನೆ ಎಂದು ಹೇಳಿದ್ದು. ಮಂಜುನಾಥ್​ ನಿಖಿಲ್​ ಕುಮಾರಸ್ವಾಮಿಯ ಅಪ್ಪಟ ಅಭಿಮಾನಿಯಾಗಿದ್ದನು ಎಂದು ತಿಳಿದು ಬಂದಿದೆ.

ಮಗನ ಸೋಲಿಗೆ ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ !

ಚನ್ನಪಟ್ಟಣ ಚುನಾವಣೆ ಫಲಿತಾಂಶದ ಬಗ್ಗೆ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ ನೀಡಿದ್ದು. ‘ಫಲಿತಾಂಶ ನಿನ್ನೆ ಬಂದಿದೆ. ಈಗ ಏನು ಚರ್ಚೆ ಮಾಡಿದರೂ ಪ್ರಯೋಜನ ಇಲ್ಲ. ಫಲಿತಾಂಶ ಒಪ್ಪಿಕೊಳ್ಳಲೇಬೇಕು
ಏನೇ ಇದ್ರೂ ಆಮೇಲೆ ಮಾತಾಡ್ತೀನಿ’ ಎಂದು ಹೇಳಿದ್ದಾರೆ.

Exit mobile version