Site icon PowerTV

ಮಹರಾಷ್ಟ್ರ ಚುನಾವಣೆ : ಆರಂಭಿಕ ಮುನ್ನಡೆ ಕಾಯ್ದುಕೊಂಡ ಬಿಜೆಪಿ ನೇತೃತ್ವದ ಮೈತ್ರಿಕೂಟ

ಮುಂಬೈ:  ಮಹಾರಾಷ್ಟ್ರ ಚುನಾವಣೆ ಈ ಬಾರಿ ದೇಶದ ಗಮನ ಸೆಳೆದಿದ್ದು. ಒಟ್ಟು 9 ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸಿವೆ. ಅದರಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ ಮತ್ತು ಕಾಂಗ್ರೆಸ್ ನೇತೃತ್ವದ ಮಹಾವಿಕಾಸ್ ಅಘಾಡಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹೋರಾಟ ನಡೆಸಿದ್ದು. ಯಾವ ಪಕ್ಷ ಮಹಾರಾಷ್ಟ್ರದ ಗದ್ದುಗೆ ಹಿಡಿದು ಅಧಿಕಾರಕ್ಕೆ ಬರುತ್ತದೆ ಎಂಬುದು ಇನ್ನೇನು ಕೆಲವೇ ಕ್ಷಣಗಳಲ್ಲಿ ತಿಳಿಯುತ್ತದೆ.

ಚುನಾಣೋತ್ತರ ಸಮೀಕ್ಷೆಗಳ ಬಹುತೇಕ ಸಮೀಕ್ಷೆಗಳ ಪ್ರಕಾರ ಬಿಜಿಪಿ ನೇತೃತ್ವದ ಸರ್ಕಾರ ಅಧಿಕಾರ ಹಿಡಿಯಲ್ಲಿದೆ ಎಂದು ಭವಿಷ್ಯ ನುಡಿದಿದ್ದು. ಮತದಾರ ಪ್ರಭುಗಳು ಯಾರ ಪರವಾಗಿ ಒಲವು ತೋರಿದ್ದಾರೆ ಎಂಬುದು ಮತ ಪೆಟ್ಟಿಗೆಯಿಂದ ಇನ್ನಷ್ಟೇ ಹೊರಬರಬೇಕಿದೆ.

ಮತಎಣಿಕೆ ಕಾರ್ಯ ಆರಂಭವಾಗಿದ್ದು. ಬಿಜೆಪಿ ನೇತೃತ್ವದ ಮಹಾಯುತಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ ಎಂದು  ಮಾಹಿತಿ ದೊರೆತಿದೆ.

Exit mobile version