Site icon PowerTV

ದೇಶಾದ್ಯಂತ ಕಾಂಗ್ರೆಸ್​ ಪಕ್ಷ ನಶಿಸಿ ಹೋಗ್ತಾ ಇದೆ :ಪ್ರಹ್ಲಾದ್​ ಜೋಶಿ

ಹುಬ್ಬಳ್ಳಿ : ರಾಜ್ಯ ಉಪಚುನಾವಣೆ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ‘ ದೇಶಾದ್ಯಂತ ಕಾಂಗ್ರೇಸ್ ಪಕ್ಷ ನಶಿಸಿ ಹೋಗ್ತಾ ಇದೆ. ಮಹಾರಾಷ್ಟ್ರದಲ್ಲಿ ಕಾಂಗ್ರೇಸ್ ಪಕ್ಷ  ವಿರೋಧ ಪಕ್ಷ ಆಗೋಕು ಯೋಗ್ಯವಲ್ಲದ ಸ್ಥಿತಿಯಲ್ಲಿದೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಜೋಶಿ ‘ಪ್ರಧಾನ ಮಂತ್ರಿ ಹೇಳಿದಂತೆ ಕಾಂಗ್ರೆಸ್ ಪಕ್ಷ, ಪರಜೀವ ಪಕ್ಷವಾಗಿದೆ.
ಸ್ವಂತ ದೇಹ ಇಲ್ಲದೇ ಕಾಂಗ್ರೇಸ್ ಪಕ್ಷ ಅತೃಪ್ತ ಆತ್ಮ ಇದ್ದಂತೆ. ಜಾರ್ಖಂಡ್​ನಲ್ಲಿ ಜೆಎಂಎಂ ಜೊತೆ ಇದ್ದಾರಂತೆ, ಅಲ್ಲಿಯು 12ರಿಂದ 13 ಸೀಟ್ ಬಂದಿದೆ. ಆದರೆ ಜಾರ್ಖಂಡದಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿಲ್ಲ.
ಉತ್ತರ ಪ್ರದೇಶ ಬೈ ಎಲೆಕ್ಷನ್ ದಲ್ಲಿ ಬಿಜೆಪಿ 9 ರಲ್ಲಿ 7 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಮಹಾರಾಷ್ಟ್ರದಲ್ಲಿಯು  ಒಳ್ಳೆ ಫಲಿತಾಂಶ ಬಂದಿದೆ. ಬಿಹಾರದಲ್ಲಿಯು ಎನ್​.ಡಿಎ ಚನ್ನಾಗಿ ಫಲಿತಾಂಶ ಬಂದಿದೆ ಎಂದು ಹೇಳಿದರು.

ಕಾಂಗ್ರೆಸ್​ ಬಗ್ಗೆ ಮಾತನಾಡಿದ ಪ್ರಹ್ಲಾಧ್​ ಜೋಶಿ ‘ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ಸ್ವಲ್ಪ ಚಿಗುರಿದೆ ಅಂತ ಹೇಳ್ತಿದ್ರು. ಲೋಕಸಭೆಯಲ್ಲಿ ನಾವು ಸೋತು, ಅವರು ಗೆದ್ದಿದ್ದಾರೆ ಅನ್ನೋ ರೀತಿ ಮಾತನಾಡಿದ್ದರು. ಕಾಂಗ್ರೆಸ್ ಪಕ್ಷದ ನಿರ್ಲಜ್ಜತನ, ಭಂಡತನವನ್ನ ನೀವೆ ನೋಡಿ. ಕಳೆದ ಮೂರು ಚುನಾವಣೆ ಸೇರಿಸಿದ್ರು ಕಾಂಗ್ರೆಸ್ ಈ ಬಾರಿ ಬಿಜೆಪಿಗೆ ಬಂದಷ್ಟು ಬಂದಿಲ್ಲ’ ಎಂದು ಹೇಳಿದರು.

 

Exit mobile version