Site icon PowerTV

ಚನ್ನಪಟ್ಟಣ ಮತಎಣಿಕೆ ಆರಂಭ: ಯಾರಾಗುತ್ತಾರೆ ಬೊಂಬೆ ನಾಡಿನ ಅಧಿಪತಿ !

ಚನ್ನಪಟ್ಟಣ :  ರಾಜ್ಯದಲ್ಲಿ ಬಾರಿ ಕುತೂಹಲ ಮೂಡಿಸಿರುವ ಚನ್ನಪಟ್ಟಣ ಚುನಾವಣೆಯ ಫಲಿತಾಂಶ ಕ್ಷಣಗಣೆನೇ ಆರಂಭವಾಗಿದ್ದು. ಬೆಳಿಗ್ಗೆ 7 ಗಂಟೆಗೆ ಸ್ಟ್ರಾಂಗ್ ರೂಮ್ ಓಪನ್ ಮಾಡಿರುವ ಸಿಬ್ಬಂದಿಗಳು ಮತ ಎಣಿಕೆ ಕೇಂದ್ರಗಳಿಗೆ ಮತ ಪೆಟ್ಟಿಗೆನ್ನು ರವಾನೆ ಮಾಡಿದ್ದಾರೆ. ಸರಿಯಾಗಿ 8ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಳಿದ್ದು. ಮೊದಲಿಗೆ ಅಂಚೆ ಮತಗಳನ್ನು ಎಣಿಕೆ ಮಾಡಲಾಗುತ್ತಿದೆ.

ಮೈತ್ರಿ ಪಾಳಯದಿಂದ ಜೆಡಿಎಸ್ ಯುವರಾಜ ನಿಖಿಲ್ ಸ್ಪರ್ಧೆ ಮಾಡಿದ್ದರೆ ಮತ್ತೊಂದೆಡೆ ಬಿಜೆಪಿಯಲ್ಲಿ ಟಿಕೆಟ್ ವಂಚಿತಾರಾದ ಸಿಪಿ ಯೋಗೇಶ್ವರ್ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ದಾರೆ.ಇಬ್ಬರ ಮದ್ಯೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದು. ಬೊಂಬೆ ನಾಡಿಗೆ ಯಾರು ಅಧಿಪತಿಯಾಗುತ್ತಾರೆ ಎಂಬ ಕುತೂಹಲ ರಾಜ್ಯದ ಜನರಲ್ಲಿ ಮನೆಮಾಡಿದೆ.

ಚುನಾವನೋತ್ತರ ಸಮೀಕ್ಷೆಯಲ್ಲಿಯೂ ಜಿದ್ದಾಜಿದ್ದಿನ ಹೋರಾಟವಿರುವುದು ತಿಳಿದುಬಂದಿದ್ದು. ಕೇಲವು ಸಮೀಕ್ಷೆಯಲ್ಲಿ ಸಿಪಿ ಯೋಗೇಶ್ವರ್ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರೆ. ಇನ್ನು ಕೆಲವು ಸಮೀಕ್ಷೆಗಳು ನಿಖಿಲ್ ಗೆಲ್ಲಲಿದ್ದಾರೆ ಎಂದು ಹೇಳುತ್ತಿವೆ.
ಆದರೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು ಇನ್ನೇನು ಕೆಲವೇ ಕ್ಷಣಗಳಲ್ಲಿ ಯಾರು ಗೆಲ್ಲಲಿದ್ದಾರೆ ಎಂದು ತಿಳಿಯಲಿದ್ದು ಕ್ಷಣ ಕ್ಷಣದ ಮಾಹಿತಿಗಾಗಿ ಪವರ್ ಟಿವಿ ವೀಕ್ಷಿಸಿ.

Exit mobile version