Site icon PowerTV

ಎರಡು ಮಕ್ಕಳನ್ನ ಕೊ*ಲೆ ಮಾಡಿ ತಾಯಿ ಆತ್ಮಹತ್ಯೆಗೆ ಯತ್ನ

ಬೆಂಗಳೂರು : ಹೆತ್ತ ತಾಯಿಯೆ ಮಕ್ಕಳನ್ನು ಕೊಲೆ ಮಾಡಿ, ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಧಾನಿಯಲ್ಲಿ ನಡೆದಿದ್ದು. ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಮಾಹಿತಿ ದೊರೆತಿದೆ. ಜಾರ್ಖಂಡ್​ನಿಂದ ಬೆಂಗಳೂರಿಗೆ ಬಂದಿದ್ದರು ಎಂದು ಮಾಹಿತಿ ದೊರೆತಿದೆ.

ಕಳೆದ ಐದಾರು ತಿಂಗಳಿಂದ ಬೆಂಗಳೂರಿನ, ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ದಂಪತಿ ಮತ್ತು ಎರಡು ಮಕ್ಕಳು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಹಿಳೆಯ ಗಂಡ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ದಂಪತಿಯ ನಡುವೆ ಇತ್ತೀಚೆಗೆ ಗಲಾಟೆಯಾಗಿದ್ದು. ಮಹಿಳೆ ಬೆಂಗಳೂರನ್ನು ಬಿಟ್ಟು ತನ್ನಗ್ರಾಮಕ್ಕೆ ಹೋಗಲು ಸಿದ್ದವಾಗಿದ್ದಳು ಎಂದು ಮಾಹಿತಿ ದೊರೆತಿದೆ.

ಇದೇ ವಿಷಯಕ್ಕೆ ದಂಪತಿಗಳ ನಡುವೆ ಜಗಳವಾಗಿದ್ದು. ನೆನ್ನೆ ಗಂಡ ಆಟೋ ಡ್ಯೂಟಿಗೆ ಹೋದಾಗ ದೊಡ್ಡ ದಾರದಿಂದ ಮಕ್ಕಳ ಕತ್ತು ಬಿಗಿದು ಕೊಲೆ ಮಾಡಿದ್ದಾಳೆ. ಮಕ್ಕಳ ಕೊಲೆ ಮಾಡಿದ ಬಳಿಕ ಮಹಿಳೆಯು ಚಾಕುವಿನಿಂದ ಕತ್ತು ಕೊಯ್ಯದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಂತರ ಗಂಡನಿಗೆ ಸಲ್ಫೀ ಪೋಟೋ ಕಳುಹಿಸಿದ್ದು. ಇದನ್ನು ನೋಡಿದ ಕೂಡಲೆ ಗಂಡ ಮನೆಗೆ ಬಂದು ಹೆಂಡತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ.

ಮೃತ ಮಕ್ಕಳನ್ನು 7 ವರ್ಷದ ಶಂಭು ಸಾಹು ಹಾಗೂ 3 ವರ್ಷದ ಶಿಯಾ ಸಾಹು ಎಂದು ಮಾಹಿತಿ ದೊರೆತಿದ್ದು. ಮಕ್ಕಳು ಸ್ಥಲದಲ್ಲೆ ಸಾವನ್ನಪ್ಪಿದ್ದರು ಎಂದು ಮಾಹಿತಿ ದೊರೆತಿದೆ. ಸ್ಥಳಕ್ಕೆ ಸುಬ್ರಮಣ್ಯಪುರ ಪೊಲೀಸರು ಬಂದು ತನಿಖೆ ನಡೆಸಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

 

Exit mobile version