Site icon PowerTV

ಹರಿದ ಪ್ಯಾಂಟ್​ಗೆ ಹೊಲಿಗೆ ಹಾಕಿದ ಸ್ನೇಹಿತರು: ಅವಮಾನ ಸಹಿಸದೆ ಆತ್ಮಹತ್ಯೆಗೆ ಯತ್ನಿಸದ ಯುವಕ

ಮಂಗಳೂರು : ಜಗತ್ತು ಆಧುನಿಕತೆಯೆಡೆಗೆ ವಾಲುತ್ತಿದ್ದ. ಯುವಕರು ಪಾಶ್ಚಾತ್ಯ ಶೈಲಿಯ ಬಟ್ಟೆಗಳ ಆಕರ್ಷಣೆಗೆ ಒಳಗಾಗಿದ್ದಾರೆ. ಅದೇ ರೀತಿಯಲ್ಲಿ ಬೆಳ್ತಂಗಡಿಯಲ್ಲಿ ಯುವಕನೊಬ್ಬ ಹರಿದ ಟೋರ್ನ್ ಪ್ಯಾಂಟ್ ಧರಿಸಿ ಒಡಾಡಿದ್ದು. ಅವಮಾನಕೊಳ್ಳಗಾದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಮಾಹಿತಿ ದೊರೆತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಘಟನೆ ನಡೆದಿದ್ದು ಶಾಹಿಲ್ (21) ಎಂಬ ಯುವಕ ವಿನೂತನ ಶೈಲಿಯ ಟೋರ್ನ್ ಜೀನ್ಸ್ ಪ್ಯಾಂಟ್​​ ಧರಿಸಿ ಬೆಳ್ತಂಗಡಿಯ ಸಂತೆಕಟ್ಟೆ ಮಾರುಕಟ್ಟೆಗೆ ಬಂದಿದ್ದನು. ಆದರೆ  ಶಬೀರ್, ಅನೀಶ್ ಪಣಕಜೆ, ಸಲೀಂ ಎಂಬವ ಮೂವರು ಸ್ನೇಹಿತರು ಶಾಹಿಲ್​ ಕೈಯನ್ನು ಹಿಂದಕ್ಕೆ ಕಟ್ಟಿ ಸಂತೆ ಮಧ್ಯೆಯಲ್ಲಿಯೆ ಪ್ಯಾಂಟ್​​ಗೆ ಹೋಲಿಗೆ ಹಾಕಿದ್ದಾರೆ ಮತ್ತು ಅದರ ವಿಡೀಯೋ ಚಿತ್ರಿಕರಿಸಿ ಆತನಿಗೆ ಅವಮಾನ ಮಾಡಿದ್ದಾರೆ.

ಇದರಿಂದ ಮನನೊಂದ ಸಾಹೀಲ್​ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಮಾಹಿತಿ ದೊರೆತಿದ್ದು. ಸದ್ಯ  ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮಾಹಿತಿ ದೊರೆತಿದೆ.

Exit mobile version