Site icon PowerTV

ಟೋಲ್​​ ಕಟ್ಟು ಎಂದಿದ್ದಕ್ಕೆ ಟೋಲ್​​ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ ಕಾಂಗ್ರೆಸ್​ ಮುಖಂಡ

ಮಂಡ್ಯ : ಬೆಂಗಳೂರು – ಮೈಸೂರು ಎಕ್ಸ್​ಪ್ರೇಸ್ ವೇ ನಲ್ಲಿ ರಾಜಕೀಯ ಪುಡಾರಿಗಳು ಪುಂಡಾಟ ಮೆರೆದಿದ್ದು. ಟೋಲ್ ದುಡ್ಡು ಕಟ್ಟದೇ ಧಿಮಾಕು ಪ್ರದರ್ಶನ ಮಾಡಿದ್ದು ಅಲ್ಲದೆ ಟೋಲ್​​ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯ ಕೂದಲು ಹಿಡಿದು ಹಲ್ಲೆ ಮಾಡಿದ್ದಾರೆ.

ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ, ಗಣಂಗೂರು ಟೋಲ್​ನಲ್ಲಿ ಘಟನೆ ನಡೆದಿದ್ದು. KA 06 M 8164 ನಂಬರ್​ನ ಕಾರಿನಲ್ಲಿ ಮೈಸೂರು ಕಡೆಗೆ ಹೊರಟ್ಟಿದ್ದ ಕಾಂಗ್ರೆಸ್ ಪಕ್ಷದ​​ ಪದಾಧಿಕಾರಿಯಿಂದ ಕೃತ್ಯ ನಡೆದಿದೆ.

ಟೋಲ್​ನಲ್ಲಿ ಕಾರನ್ನು ನಿಲ್ಲಿಸಿದ ಸಿಬ್ಬಂದಿಗಳ ಮೇಲೆ ಕೈ ನಾಯಕ ಜಗಳ ತೆಗೆದಿದ್ದು.’ ನಾನು ಕಾಂಗ್ರೆಸ್​ ಮುಖಂಡ. ಟೋಲ್ ದುಡ್ಡು ಕಟ್ಟಲ್ಲ’ ಎಂದು ಕ್ಯಾತೆ ತೆಗೆದಿದ್ದಾನೆ. ಆದರೆ ಟೋಲ್​ ಸಿಬ್ಬಂದಿಗಳೂ ಟೋಲ್​ ಕಟ್ಟದೆ ಮುಂದೆ ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ್ದಿದ್ದು. ಪರಸ್ಪರ ಮಾತಿನ ಚಕಮಕಿ ನಡೆದಿದೆ.

ಈ  ವೇಳೆ ಕೋಪಗೊಂಡ ಕೈ ನಾಯಕ ಟೋಲ್​ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು. ಮಹಿಳೆಯ ಜುಟ್ಟು ಹಿಡಿದು ಎಳೆದಾಡಿದ್ದಾನೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಶ್ರೀ ರಂಗಪಟ್ಟಣ ಪೋಲಿಸರು ಬಂದು ಪರಿಶೀಲನೆ ನಡೆಸಿದ್ದು. ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳದೆ ಕಳುಹಿಸಿಕೊಟ್ಟಿದ್ದಾರೆ ಎಂದು ಮಾಹಿತಿ ದೊರೆತಿದೆ. ಶ್ರೀ ರಂಗಪಟ್ಟಣ ಪೋಲಿಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Exit mobile version