Site icon PowerTV

ಮಾಧ್ಯಮದವರ ಮೇಲೆ ಮತ್ತೆ ಕೋಪಗೊಂಡ ಸಿಎಂ ಸಿದ್ದರಾಮಯ್ಯ

ಮೈಸೂರು : ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಮಾಧ್ಯಮದವರ ಮೇಲೆ ಪದೇ ಪದೇ ಸಿಟ್ಟಾಗುತ್ತಿದ್ದು. ಇಂದು ಸಹ ಮಾಧ್ಯಮದವರ ಪ್ರಶ್ನೆಗೆ ಗರಂ ಆದರು.

ಪರ್ತಕರ್ತರ ಪ್ರಶ್ನೆಯಿಂದ ಕುಪಿತಗೊಂಡ ಸಿಎಂ ‘ನೀವು ಬರಿ ಅವರು ಹೇಳೋದನ್ನ ತೋರಿಸುತ್ತೀರ.
ನಾವು ಹೇಳುವದನ್ನೂ ತೋರಿಸಿ. ಬಿಜೆಪಿ ಮಾಡುವ ಕೆಟ್ಟ ಕೆಲಸವನ್ನು ನೀವು ತೋರಿಸುವುದಲ್ಲ.
ಸತ್ಯವನ್ನು ತೋರಿಸುವ ಕೆಲಸ ಮಾಡಿ ಎಂದು ಹೇಳಿದರು. ಮುಂದುವರಿದು ಮಾತನಾಡಿದ ಸಿಎಂ ‘ನಮ್ಮ ಬಗ್ಗೆ ತೋರಿಸಬೇಡಿ ಎಂದಲ್ಲ ನಾವು ತಪ್ಪು ಮಾಡಿದಾಗ ಅದನ್ನೂ ತೋರಿಸಿ ಎಂದು ಟೇಬಲ್​ ಕುಟ್ಟಿ’  ಮಾತನಾಡಿದರು.

ಆದರೆ ಜವಬ್ದಾರಿಯುತ ಮಾಧ್ಯಮವಾಗಿ ನಾವು ಪ್ರಶ್ನೆ ಮಾಡುವ ಸ್ಥಾನದಲ್ಲಿದ್ದು. ಜನರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುತ್ತೇವೆ. ಯಾವುದೇ ಪಕ್ಷಪಾತ ಮಾಡದೆ ನಿರ್ಭೀತಿಯಿಂದ ಕೆಲಸ ಮಾಡುವುದೇ ಪವರ್​ ಟಿವಿಯ ಧ್ಯೇಯವಾಗಿದೆ ಎಂದಷ್ಟೆ ನಾವು ಹೇಳಬಹುದಾಗಿದೆ.

Exit mobile version