Site icon PowerTV

ಚನ್ನಪಟ್ಟಣ ಉಪಚುನಾವಣೆ : ರಾಮನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ ಎಣಿಕಾ ಕಾರ್ಯ

ರಾಮನಗರ: ನಾಳೆ ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ಹಿನ್ನಲೆ. ಮತ ಎಣಿಕೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು. ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಸುದ್ದಿಗೋಷ್ಠಿ ನಡೆಸಿ ಮತ ಎಣಿಕೆ ಕಾರ್ಯದ ಕುರಿತು ವಿವರಿಸಿದರು.

ಚನ್ನಪಟ್ಟಣದಲ್ಲಿ ಶಾಂತಿಯುತವಾಗಿ ಉಪ ಚುನಾವಣೆ ಮುಗಿದಿದೆ. ನಾಳೆ ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಣಿಕಾ ಕಾರ್ಯ ನಡೆಯಲಿದ್ದು. ಈ ಬಾರಿಯ ಚುನಾವಣೆಯಲ್ಲಿ ಒಟ್ಟು 2,06,886 ಮತಗಳು ಚಲಾವಣೆ ಆಗಿದ್ದು. ಯಾರಿಗೆ ವಿಜಯಲಕ್ಷ್ಮಿ ಒಲಿಯಲಿದ್ದಾಳೆ ಎಂಬುದು ಕುತೂಹಲ ಕೆರಳಿಸಿದೆ.

ನಾಳೆ ಬೆಳಿಗ್ಗೆ 6:30ಕ್ಕೆ ಸ್ಟ್ರಾಂಗ್ ರೂಂ ಓಪನ್ ಆಗಲಿದ್ದು. ಬೆಳಿಗ್ಗೆ 7:30ಕ್ಕೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಒಟ್ಟು ಮೂರು ಕೊಠಡಿಗಳಲ್ಲಿ ಮತ ಎಣಿಕಾ ಕಾರ್ಯ ನಡೆಯಲಿದ್ದು. ಒಟ್ಟು 14 ಟೇಬಲ್ ನಲ್ಲಿ 69 ಸಿಬ್ಬಂದಿಗಳು ಮತ ಎಣಿಕೆ ಕಾರ್ಯದಲ್ಲಿ ಭಾಗವಹಿಸುತ್ತಾರೆ. 20 ಸುತ್ತುಗಳ ಬಳಿಕ ಫಲಿತಾಂಶ ಪ್ರಕಟವಾಗಲಿದೆ ಎಂದು ಮಾಹಿತಿ ದೊರೆತಿದೆ.

ಮೊದಲು ಪೋಸ್ಟಲ್​​ ಬ್ಯಾಲೆಟ್​ಗಳ ಎಣಿಕೆ ಕಾರ್ಯ ನಡೆಯಲಿದ್ದು. ಬಳಿಕ ಇವಿಎಂ ಮತ ಎಣಿಕೆ ಮಾಡಲಾಗುತ್ತದೆ.  ಎಣಿಕಾ ಕೇಂದ್ರದಲ್ಲಿ ಸಿಸಿಟಿವಿ ಕಣ್ಗಾವಲಿದ್ದು ಎಣಿಕಾ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ಯಾರಾಮಿಲಿಟರಿ ಸೇರಿ 500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಿದ್ದು.
ಇಂದು(ನ.22) ಸಂಜೆಯಿಂದ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಾಗಲಿದ್ದು. ಮದ್ಯಮಾರಾಟಕ್ಕೆ  ನಿಷೇದ ಹೇರಲಾಗಿದೆ.

ಮತ ಎಣಿಕೆ ಕೇಂದ್ರದಲ್ಲಿ ವಿಜಯೋತ್ಸವ ಮಾಡಲು ಮತ್ತು ಪಟಾಕಿ ಸಿಡಿಸಲು ಅವಕಾಶವಿಲ್ಲ ಎಂದು ರಾಮನಗರ ಜಿಲ್ಲಾಧಿಕಾರಿ ಯಶವಂತ್​.ವಿ. ಗುರುಕರ್​ ಮಾಹಿತಿ ನೀಡಿದ್ದಾರೆ.

Exit mobile version