Site icon PowerTV

ನಾಳೆ ಭರತ್​ ಬೊಮ್ಮಾಯಿ ದೊಡ್ಡ ಅಂತರದಲ್ಲಿ ಗೆಲ್ಲುತ್ತಾನೆ : ಬಸವರಾಜ್​ ಬೊಮ್ಮಾಯಿ

ಹುಬ್ಬಳ್ಳಿ : ರಾಜ್ಯದಲ್ಲಿ ಉಪಚುನಾವಣೆ ಮುಗಿದಿದ್ದು ಎಲ್ಲರು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ನಾಳೆ ಬೆಳಿಗ್ಗೆ ಮತಎಣಿಕೆ ಕಾರ್ಯ ನಡೆಯಲಿದ್ದು. ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಮೂರು ಕ್ಷೇತ್ರಗಳ ಪೈಕಿ ಶಿಗ್ಗಾಂವಿಯು ಭಾರೀ ಕುತೂಹಲ ಮೂಡಿಸಿದ್ದು. ಭರತ್​ಬೊಮ್ಮಯಿ ದೊಡ್ಡ ಅಂತರದಿಂದ ಗೆಲ್ಲುತ್ತಾನೆ ಎಂದು ಮಾಜಿ ಸಿಎಂ ಬಸವರಾಜ್​ ಬೊಮ್ಮಯಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಬೊಮ್ಮಯಿ ‘ನಾಳೆ ಭರತ್ ಬೊಮ್ಮಾಯಿ ದೊಡ್ಡ ಅಂತರದಲ್ಲಿ ಗೆಲ್ತಾರೆ ಅನ್ನೋ ವಿಶ್ವಾಸವಿದೆ ಎಂದು ಹೇಳಿದರು. ಸದ್ಯ ಕಾಂಗ್ರೆಸ್​​ ಸರ್ಕಾರಕ್ಕೆ ದಿಕ್ಕು ದೆಸೆ ಎಂಬುದಿಲ್ಲ.ಯಾವ ನಾಯಕತ್ವವೂ ಇಲ್ಲ ಅದಕ್ಕೆ ವಕ್ಫ್​ ನೋಟಿಸ್ ಕೊಟ್ಟರು ಮತ್ತೆ ವಾಪಸ್ ಪಡೆದರು, ಸೈಟ್ ತಗೊಂಡರು ಮತ್ತೆ ವಾಪಸ್ ಕೊಟ್ಟರು ಹಾಗಾಗಿ ಇದೊಂದು ಯುಟರ್ನ್ ಸರ್ಕಾರ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಬೊಮ್ಮಯಿ ‘ಸರ್ಕಾರ ಇದೀಗ ಆಸ್ಪತ್ರೆ ಸೇವೆಗೆಳ ದರ ಹೆಚ್ಚಳ ಮಾಡತೀದಾರೆ‌.
ಸರ್ಕಾರದ ಬಳಿ ದುಡ್ಡಿಲ್ಲ ,ಸರ್ಕಾರ ದಿವಾಳಿಯಾಗಿದೆ ಅದಕ್ಕೆ ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಉಪಚುನಾವಣೆ ಬಗ್ಗೆ ಬೊಮ್ಮಯಿ ಮಾತು !

ರಾಜ್ಯ ಚುನಾವಣೆ ಎಣಿಕೆ ಬಗ್ಗೆ ಮಾತನಾಡಿದ ಬಸವರಾಜ್​ಬೊಮ್ಮಯಿ ‘ನಾನು ಎಕ್ಸಿಟ್​ಪೂಲ್​ ನಂಬಿ ಮಾತಾಡತಿಲ್ಲ. ಆದರೆ ಮೂರು ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ. ಕಾಂಗ್ರೆಸ್​​ ನಾಳೆಯವರೆಗು ನಾವೆ ಗೆಲ್ಲುತ್ತೇವೆ ಎಂದು ಹೇಳುತ್ತಾರೆ. ಆದರೆ ನಮಗೆ ಮೂರು ಕ್ಷೇತ್ರದಲ್ಲಿ ಗೆಲ್ತೀವಿ ಅನ್ನೋ ವಿಶ್ವಾಸ ಇದೆ. ಆಷ್ಟೆ ಅಲ್ಲದೆ
ಮಹಾರಾಷ್ಟ್ರ ಹಾಗೂ ಜಾರ್ಖಂಡ್ ನಲ್ಲಿ ನಾವೇ ಸರ್ಕಾರ ರಚನೆ ಮಾಡ್ತೀವಿ ಎಂದುನ ಹೇಳಿದರು.

Exit mobile version