Site icon PowerTV

ಕರ್ನಾಟಕದ ರೈತರಿಗೆ ನರ್ಬಾಡ್​​ ಅನ್ಯಾಯ ಮಾಡಿದೆ : ಸಿಎಂ. ಸಿದ್ದರಾಮಯ್ಯ

ದೆಹಲಿ : ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿ ಮಾಡಿರುವ ಸಿಎಂ ನರ್ಬಾಡ್​ನಿಂದ ರಾಜ್ಯಕ್ಕೆ ಬಂದಿರುವ ಅನುದಾನದ ಕಡಿತದ ಕುರಿತು ಚರ್ಚೆ ಮಾಡಿದ್ದಾರೆ.

ಇದರ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಸಿಎಂ’ ನಬಾರ್ಡ್ ವಿಚಾರದಲ್ಲಿ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಭೇಟಿ ಮಾಡಿದ್ದೇನೆ. ಕಳೆದ ವರ್ಷ 5,600 ಕೋಟಿ ಲೋನ್ ಕೊಟ್ಟಿದ್ರು ಆದರೆ ಈ ವರ್ಷ ಕೇವಲ 2340 ಕೋಟಿ ಕೊಟ್ಟಿದ್ದಾರೆ. ಇದರಿಂದ 58% ಹಣ ಕಡಿಮೆಯಾಗಿದೆ. ರೈತರಿಗೆ ಇವರು ಪ್ರೀಯಾಗಿ ಕೊಡಲ್ಲ, ನಾವು ಕೊಡ್ತೇವೆ ಇದರಿಂದ ರೈತರಿಗೆ ಅನ್ಯಾಯ ಮಾಡಿದಂತೆ ಆಗಿದೆ ಮತ್ತು ರೈತರಿಗೆ ತೊಂದರೆಯಾಗ್ತದೆ. ಕರ್ನಾಟಕ ಬಡ್ಡಿ ರಹಿತವಾಗಿ ರೈತರಿಗೆ ಲೋನ್ ಕೊಡುತ್ತೆ ಆದರು ಕೇಂದ್ರೆದಿಂದ ನಮಗೆ ಅನ್ಯಾಯವಾಗುತ್ತಿದೆ’ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಸಿಎಂ ಸಿದ್ದರಾಮಯ್ಯ ‘RBI & ನಬಾರ್ಡ್ ಬರುವುದು ಕೇಂದ್ರ ಸರ್ಕಾರದ ಅಧೀನದಲ್ಲಿ.ಅವರು ಹಣ ಕೊಡಲು ಹೇಳಬಹುದಲ್ವಾ.ಕಮರ್ಷಿಯಲ್ ಬ್ಯಾಂಕ್ ನಲ್ಲಿ ಲೋನ್ ತಗೊಳೋಕೆ ಆಗುತ್ತಾ. ಬಿಜೆಪಿಯವರು ರೈತರ ಬಗ್ಗೆ ಮಾತನಾಡಿ ಅಂದ್ರೆ ಮಾತನಾಡಲ್ಲ ಎಂದು ವಿಪಕ್ಷ ನಾಯಕರ ಬಗ್ಗೆ ವಾಗ್ದಾಳಿ ನಡೆಸಿದರು.

Exit mobile version