Site icon PowerTV

ದಾಳಿಂಬೆ ಬೆಲೆಯಲ್ಲಿ ದಿಢೀರ್ ಕುಸಿತ: ಕಂಗಲಾದ ರೈತರು

ದೇವನಹಳ್ಳಿ :  ಕೆಂಪು ಸುಂದರಿ ಎಂದೆ ಕರೆಯುವ ದಾಳಿಂಬೆ ಬೆಲೆಯಲ್ಲಿ  ದಿಢೀರ್ ಕುಸಿತವಾಗಿದ್ದು.
ಕೆ.ಜಿ ದಾಳಿಂಬೆಗೆ 100 ರಿಂದ 150 ರೂಪಾಯಿ ಬೆಲೆ ಇಳಿಕೆಯಾಗಿ ಬೆಳೆಗಾರರಿಗೆ ಶಾಕ್​​ ನೀಡಿದೆ.

ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬಂಪರ್ ಬೆಳೆ ಬೆಳೆದಿರುವ ರೈತರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ದಿಡೀರನೆ ದಾಳಿಂಬೆ ಬೆಲೆಯಲ್ಲಿ ಬೆಲೆ ಇಳಿಕೆಯಾಗಿದ್ದು. ಒಂದು ಕೆ.ಜಿ ಗೆ 50 ರಿಂದ 70 ರೂಪಾಯಿ ಬೆಲೆಗೆ ಮಾರಾಟವಾಗುತ್ತಿದೆ.

 

ದಲ್ಲಾಳಿಗಳ ಕಾಟಕ್ಕೆ ದಾಳಿಂಬೆ ಬೆಲೆ ಇಳಿಕೆಯಾಗಿದೆ ಎಂದು ಮಾಹಿತಿ ದೊರೆತಿದ್ದು.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದಿರುವ ರೈತರು ಇದೀಗ ಕಂಗಲಾಗಿದ್ದಾರೆ.

Exit mobile version