Site icon PowerTV

ವಿಜಯೇಂದ್ರ ಪರ ಬ್ಯಾಟ್​​ ಬೀಸಿದ ಮಾಜಿ ಸಚಿವ ಬಿ.ಸಿ ಪಾಟೀಲ್​

ಬೆಂಗಳೂರು : ನಗರದಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಸಿ ಪಾಟೀಲ್​​, ವಿಜಯೇಂದ್ರ ಪರ ಬ್ಯಾಟ್​​ ಬೀಸಿದ್ದು, ಯುವಕನಾದ ವಿಜಯೇಂದ್ರ ಕೆಲಸ ಮಾಡುತ್ತಿದ್ದಾರೆ ನಾವು ಅವರ ಬೆಂಬಲಕ್ಕೆ ನಿಂತು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಮಾಜಿ ಸಚಿವ ಬಿ.ಸಿ ಪಾಟೀಲ್ ರಾಜ್ಯ ಬಿಜೆಪಿಯ ಒಡಕಿನ ಬಗ್ಗೆ ಹೇಳಿಕೆ ನೀಡಿದ್ದು.’ರಾಜ್ಯಾಧ್ಯಕ್ಷರ ಮೂಲಕವೇ ಎಲ್ಲವೂ ನಡೆಯಬೇಕು ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದಂತೆ ವಿಜಯೇಂದ್ರ ಕೆಲಸ ಮಾಡ್ತಿದ್ದಾರೆ.
ನಾವೆಲ್ಲರೂ ರಾಜ್ಯಾಧ್ಯಕ್ಷರ ಬೆಂಬಲಕ್ಕೆ ನಿಂತು‌ಕೆಲಸ ಮಾಡುತ್ತೇವೆ. ವಕ್ಫ್​​ ವಿಷಯದಲ್ಲಿ ಈಗಾಗಲೇ ಮೂರು ತಂಡ ರಚನೆ ಮಾಡಲಾಗಿದೆ. ವಕ್ಫ್ ವಿಚಾರದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಪಕ್ಷದ ಜೊತೆಗೆ ನಾವು ಇದ್ದೇವೆ. ಕೆಲವರು ಗೊಂದಲ ಸೃಷ್ಟಿ ಮಾಡ್ತಿದ್ದಾರೆ ಆ ವಿಚಾರದಲ್ಲಿ ದೆಹಲಿ ನಾಯಕರ ಭೇಟಿ ಮಾಡುತ್ತೇವೆ ಎಂದು ಹೇಳಿದರು.

ಬಿಜೆಪಿ ರೆಬಲ್​ ನಾಯಕ ಬಸನಗೌಡ ಪಾಟೀಲ್​ ಬಗ್ಗೆ ಮಾತನಾಡಿದ ಬಿ.ಸಿ ಪಾಟೀಲ್​ ‘ಯತ್ನಾಳ ಅವರು ಹಿರಿಯರಿದ್ದಾರೆ ಅವರು ಪ್ರತ್ಯೇಕ ಹೋರಾಟ ಮಾಡಬಾರದು. ರಾಜ್ಯಾಧ್ಯಕ್ಷರ ಮಾರ್ಗದರ್ಶನದಿಂದ ನಾವು ಸಭೆ ಮಾಡ್ತಿಲ್ಲ. ನಮಗೆ ನಾವೇ ಸೇರಿಕೊಂಡು ಸಭೆ ಮಾಡುತ್ತೇವೆ. ಅನಗತ್ಯವಾಗಿ‌ ಗೊಂದಲ ಸೃಷ್ಟಿ ಮಾಡಬಾರದು
ಕಾಂಗ್ರೆಸ್ ವಿರುದ್ಧ ಹೇಳಿಕೆ ಕೊಡಬೇಕು, ಆದರೆ ನಮ್ಮ ಪಕ್ಷದ ವಿರುದ್ಧವೇ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಬಿ.ಸಿ ಪಾಟೀಲ್​ ‘ಯಾರೂ ಕೂಡ ಪಕ್ಷಕ್ಕೆ ಅನಿವಾರ್ಯ ಅಲ್ಲ ಎಂದು ಪರೋಕ್ಷವಾಗಿ ಯತ್ನಾಳ್ ಮತ್ತು ತಂಡದ ಮೇಲೆ ಗರಂ ಆದರು. ಪಕ್ಷದ ವಿರುದ್ಧ ಯಾರೂ ಮಾತಬಾಡಬಾರದು
ವಕ್ಪ್ ಹೋರಾಟಕ್ಕೆ ಪಕ್ಷ ಮೂರು ಟೀಂ ಆಗಿದೆ, ಮೂರು ತಂಡಗಳಲ್ಲಿ ಎಲ್ಲಾ ನಾಯಕರು ಇದ್ದಾರೆ. ಅದರ ಪ್ರಕಾರ ನಾವೆಲ್ಲಾ ಹೋಗಬೇಕು ಎಂಎದು ಹೇಳಿದರು.

 

Exit mobile version