Site icon PowerTV

ಡಿಸೆಂಬರ್​ 11ರಂದು ತಮ್ಮ ಬಹುಕಾಲದ ಗೆಳೆಯನನ್ನು ಮದುವೆಯಾಗಲಿದ್ದಾರೆ ಕೀರ್ತಿ ಸುರೇಶ್​​

ಚಿತ್ರರಂಗದ ಮತ್ತೊಬ್ಬ ನಟಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಮದುವೆಯ ವದಂತಿಗಳಿಗೆ ಆಗಾಗ್ಗೆ ಸುದ್ದಿಯಾಗುತ್ತಿದ್ದ ಕೀರ್ತಿ ಸುರೇಶ್ ಈಗ ತನ್ನ ಬಹುಕಾಲದ ಗೆಳೆಯನನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.


ಡಿಸೆಂಬರ್ ಎರಡನೇ ವಾರದಲ್ಲಿ ಗೋವಾದ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆ ನಡೆಯಲಿದೆ ಎಂದು ತಿಳಿದು ಬಂದಿದೆ. ಮದುವೆಗೆ ಕೇವಲ ಕುಟುಂಬಸ್ಥರು ಮತ್ತು ಆಯ್ದ ಸ್ನೇಹಿತರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ದೊರೆತಿದೆ.

ಕೆಲವು ವರದಿಗಳ ಪ್ರಕಾರ ಡಿಸೆಂಬರ್ 11 ರಂದು ಸುಂದರವಾದ ರೆಸಾರ್ಟ್‌ನ ಮಧ್ಯೆ  ಮದುವೆ ನಡೆಯಲಿದೆ ಎಂದು ಮಾಹಿತಿ ದೊರೆತಿದ್ದು. ಡಿಸೆಂಬರ್​ 9ರಿಂದಲೇ ಮದುವೆ ಶಾಸ್ತ್ರಗಳು ಆರಂಭವಾಗಲಿದೆ ಎಂದು ಮಾಹಿತಿ ದೊರೆತಿದೆ. ಮದುವೆಗೆ ಕೇವಲ ಆತ್ಮೀಯರಿಗೆ ಮಾತ್ರ ಆಮಂತ್ರಣವನ್ನು ನೀಡಿದ್ದಾರೆ. ದಕ್ಷಿಣ ಭಾರತ ಖ್ಯಾತ ಬಹುಭಾಷ ನಟಿ ಕೀರ್ತಿ ಸುರೇಶ್​​ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿದ್ದು ಕೊನೆಗು ಹಸೆಮಣೆ ಏರುತ್ತಿದ್ದಾರೆ.

Exit mobile version