Site icon PowerTV

BJP-RSS ಯಾವಾಗಲೂ ದ್ವೇಷ ಬಿತ್ತುವವರು ಎಂದು ಖರ್ಗೆ ಹೇಳಿಕೆ ಸಮರ್ಥಿಸಿಕೊಂಡ ಹರಿಪ್ರಸಾದ್​

ಬೆಂಗಳೂರು:  ‘ಬಿಜೆಪಿ ಆರ್‌ಎಸ್‌ಎಸ್ ವಿಷದ ಹಾವಿದ್ದಂತೆ ಅವುಗಳನ್ನು ಕೊಲ್ಲಿ’ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಬಿಕೆ.ಹರಿಪ್ರಸಾದ್​ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಮಾದ್ಯಮದವರೊಂದಿಗೆ ಹೇಳಿಕೆ ನೀಡಿದ್ದು. ‘ಬಿಜೆಪಿ ಮತ್ತು ಆರ್‌ಎಸ್ಎಸ್ ಯಾವಾಗಲೂ ದ್ವೇಷ ಬಿತ್ತುವವರು. ಅವರು ದ್ವೇಷ ಬಿತ್ತಿದ ಕಾರಣದಿಂದಲೇ ಗಾಂಧೀಜಿ ಹತ್ಯೆಯಾಯ್ತು. ಇಂದಿರಾಗಾಂಧಿ ಹತ್ಯೆಗೂ ಅವರು ಬಿತ್ತಿದ ದ್ವೇಷವೇ ಕಾರಣ, ದೇಶದಲ್ಲಿ ದ್ವೇಷ ಬಿತ್ತುವ ಕೆಲಸ ಬಿಜೆಪಿ ಆರ್‌ಎಸ್ಎಸ್ ಮಾಡ್ತಿದೆ’ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಹರಿಪ್ರಸಾದ್​ ‘ಬಿಜೆಪಿಯವರು ಇವತ್ತು ಜಾರ್ಖಂಡ್​ನಲ್ಲೂ ದ್ವೇಷದ ಜಾಹಿರಾತು ನೀಡಿದ್ದಾರೆ. ಅದನ್ನ ನೋಡಿದ್ರೆ ಅದರ ಮೇಲೆ ಕೇಸ್ ಹಾಕಬೇಕು ಆ ರೀತಿ ಇದೆ ಹಾಗಾಗಿ ಇಂತಹ ದ್ವೇಷ ಬಿತ್ತುವವರನ್ನ ಬುಡ ಸಮೇತ ಕಿತ್ತೊಗೆಯಬೇಕು. ಸಂಪೂರ್ಣವಾಗಿ ಮುಗಿಸಬೇಕು ಅಂತ ಖರ್ಗೆ ಹೇಳಿರೋದು
ಕೊಲ್ಲಿ ಅಂದ್ರೆ ದೈಹಿಕವಾಗಿ ಅಲ್ಲ ರಾಜಕೀಯ ಮುಗಿಸಬೇಕು ಅಂತ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ
ಮಲ್ಲಿಕಾರ್ಜುನ ಖರ್ಗೆ ಹೇಳಿರೋದರಲ್ಲಿ ಸತ್ಯ ಇದೆ’ ಎಂದು ಖರ್ಗೆ ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡರು.

Exit mobile version