Site icon PowerTV

ಐದು ತಿಂಗಳ ಗರ್ಭಿಣಿ ಮಹಿಳೆ ಆತ್ಮ ಹ*ತ್ಯೆ

ಚಿಕ್ಕೊಡಿ:  ಕೌಟುಂಬಿಕ ಕಲಹ ಹಿನ್ನಲೆ ಗರ್ಭಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು.ಲಲಿತಾ ಸದಾನಂದ ಕರಜಗಿ ಎಂಬಾಕೆಯನ್ನು ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಆದರೆ ಲಲಿತಾ ಕುಟುಂಬ್ಥರು ಆಕೆಯನ್ನು ಹೊಡೆದು ನೇತು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಭೆಂಡಾವಾಡ ಗ್ರಾಮದಲ್ಲಿ ಘಟನೆ ನಡೆದಿದ್ದು. ಲಲಿತಾ ಮತ್ತು ಆಕೆಯ ಗಂಡನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗುತ್ತಿತ್ತು ಎಂದು ಮಾಹಿತಿ ದೊರೆತಿದೆ. ಇದೇ ಕಾರಣಕ್ಕೆ ಲಲಿತಾ ಸದಾನಂದ ಕರಜಗಿ ಮನೆಯಲ್ಲಿ ಯಾರು ಇಲ್ಲದೆ ಇರುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ದೊರೆತಿದೆ.

ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯುತ್ತಿದ್ದಂತೆ  ಲಲಿತಾ ಪತಿ ಹಾಗೂ ಕುಟುಂಬಸ್ಥರು ಪರಾರಿಯಾಗಿದ್ದು. ಇತ್ತ ಲಲಿರತಾ ಕುಟುಂಬಸ್ಥರು ಕೊಲೆ ಮಾಡಿ ನೇತು ಹಾಕಿ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಮೃತ ಲಲಿತಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು. ಸ್ಥಳಕ್ಕೆ ರಾಯಬಾಗ ಪೋಲಿಸರ ಭೇಟಿ ಪರಿಶೀಲನೆ ನಡೆಸದ್ದಾರೆ.

Exit mobile version