Site icon PowerTV

ಎಲೆಕ್ಟ್ರಿಕ್​​ ಶೋರೂಂಗೆ ಬೆಂಕಿ : ಯುವತಿ ಸಜೀವ ದಹನ

ಬೆಂಗಳೂರು : ನಗರದ ರಾಜ್​​ ಕುಮಾರ್ ರಸ್ತೆಯ ಎಲೆಕ್ಟ್ರಿಕ್ ಸ್ಕೂಟರ್ ಶೊರೂಂ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು.ಯುವತಿಯೋರ್ವಳು ಸಜೀವ ದಹನವಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.

ನವರಂಗ್ ಚಿತ್ರಮಂದಿರ​​ ಬಳಿಯಲ್ಲಿನ ಎಲೆಕ್ಟ್ರಿಕ್​​ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು. ಬೆಂಕಿಯ ಕೆನ್ನಾಳಿಗೆಗೆ ಇಡೀ ಶೋರೂಂ ಬೆಂಕಿಯಲ್ಲಿ ದಗದಗಿಸಿದೆ. ಶೋರೂಂನಲ್ಲಿದ್ದ ಒಂದು  ಸ್ಕೂಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಇಡೀ ಶೋರೂಂ ಸುಟ್ಟು ಭಸ್ಮವಾಗಿದ್ದು. ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಯುವತಿ ಕಟ್ಟಡದೊಳಗೆ ಸಜೀವ ದಹನವಾಗಿದ್ದಾಳೆ ಎಂದು ಮಾಹಿತಿ ದೊರೆತಿದೆ.

ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು. ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಮಾಹಿತಿ ದೊರೆತಿದ್ದು. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಯಾವ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಇನ್ನಷ್ಟೆ ತನಿಖೆ ನಡೆಸಬೇಕಾಗಿದೆ. ಮೃತಪಟ್ಟಿರುವ ಯುವತಿಯ ಬಗ್ಗೆಯು ಇನ್ನಷ್ಟೆ ಹೆಚ್ಚಿನ ಮಾಹಿತಿ ದೊರೆಯಬೇಕಾಗಿದೆ.

Exit mobile version