Site icon PowerTV

ಶಬರಿಮಲೆಗೆ ತೆರಳಿದ್ದ ಕರ್ನಾಟಕದ ಅಯ್ಯಪ್ಪ ಭಕ್ತರಿದ್ದ ಬಸ್‌ ಅಪಘಾತ: 27 ಮಂದಿಗೆ ಗಾಯ

ಕೇರಳ: ಶಬರಿಮಲೆ ದೇವಸ್ಥಾನಕ್ಕೆ ತೆರಳಿದ್ದ ಕರ್ನಾಟಕದ ಅಯ್ಯಪ್ಪ ಭಕ್ತರಿದ್ದ ಬಸ್ ಕೇರಳದ ವಯನಾಡ್ ಬಳಿಯ ತಿರುನೆಲ್ಲಿ ಎನ್ನುವಲ್ಲಿ ಅಪಘಾತಕ್ಕೀಡಾಗಿದ್ದು 27 ಜನ ಗಾಯಗೊಂಡಿದ್ದಾರೆ. ಬಸ್ ಮೈಸೂರಿನ ಹುಣಸೂರಿಗೆ ತೆರಳುತ್ತಿತ್ತು. ಬೆಳಿಗ್ಗೆ 6 ಗಂಟೆಗೆ ಘಟನೆ ಸಂಭವಿಸಿದೆ ಎಂದು ಮಾಹಿತಿ ದೊರೆತಿದೆ.

ಬಸ್‌ನಲ್ಲಿ 45 ಮಂದಿ ಭಕ್ತರಿದ್ದರು. ಗಾಯಾಳುಗಳಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ . ಗಾಯಗೊಂಡವರನ್ನು ವಯನಾಡ್‌ನ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಕ್ತರು ನವೆಂಬರ್.15 ರಿಂದ ಆರಂಭವಾದ ಶಬರಿಮಲೆ ದೇವಸ್ಥಾನದ ವಾರ್ಷಿಕ ಮಂಡಲ-ಮಕರವಿಳಕ್ಕು ಉತ್ಸವದಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ಅಪಘಾತದ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಶಮರಿಮಲೆಗೆ ತೆರಳಿದ್ದ ಕರ್ನಾಟಕದ ಭಕ್ತರಿದ್ದ ವಾಹನ ವಯನಾಡ್‌ನಲ್ಲಿ ಅಪಘಾತಕ್ಕೀಡಾಗಿರುವುದು ನೋವುಂಟು ಮಾಡಿದೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ’ ಎಂದು ಬರೆದುಕೊಂಡಿದ್ದಾರೆ.

Exit mobile version