Site icon PowerTV

ನವೆಂಬರ್​ 25ಕ್ಕೆ ಮೂಡ ಪ್ರಕರಣದ ತನಿಖಾ ವರದಿ ಸಲ್ಲಿಕೆ ಸಾಧ್ಯತೆ

ಮೈಸೂರು : ಮೂಡಾ ಹಗರಣದ ಕುರಿತು ತನಿಖೆ ನಡೆಸುತ್ತಿರುವ ಲೋಕಯುಕ್ತ ಇದೆ ತಿಂಗಳು 25ಕ್ಕೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಸಿದ್ದತೆ ನಡೆಸಿದೆ ಎಂದು ಮಾಹಿತಿ ದೊರೆತಿದೆ.

ಈವರಗೆ ನಡೆಸಿರುವ ತನಿಖೆಯ ಎಲ್ಲಾ ವರದಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಲು ಲೋಕಾಯುಕ್ತದಿಂದ ಸಿದ್ದತೆ ನಡೆಸಿದ್ದು. ನ್ಯಾಯಲಯದ ಸೂಚನೆ ಮೇರೆಗೆ ಡಿಸೆಂಬರ್​ 24ರ ಒಳಗೆ ನ್ಯಾಯಲಯಕ್ಕೆ ಅಂತಿಮ ವರದಿ ಸಲ್ಲಿಸಲು ಸಿದ್ದತೆ ನಡೆಸಲಾಗಿದೆ.

ಈವರಗೆ ಮೂಡಾ ಪ್ರಕರಣದ ನಾಲ್ವರು ಆರೋಪಿಗಳನ್ನು ವಿಚಾರಣೆ ನಡೆಸಿರುವ ಲೋಕಾಯುಕ್ತ. A1 ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ, A2 ಆರೋಪಿ ಬಿ.ಎನ್.ಪಾರ್ವತಿ, A3 ಆರೋಪಿ ಮಲ್ಲಿಕಾರ್ಜುನಸ್ವಾಮಿ ಹಾಗೂ
A4 ಆರೋಪಿ ದೇವರಾಜು ವಿಚಾರಣೆ ಮಾಡಲಾಗಿದೆ. ನಾಲ್ವರು ಆರೋಪಿಗಳ ವಿಚಾರಣೆ  ಮಾಡಿರುವ ಲೋಕಾಯುಕ್ತ ಎಲ್ಲರ ಹೇಳಿಕೆಯನ್ನು ವಿಡಿಯೋ ಮೂಲಕ ದಾಖಲೆ ಮಾಡಿಕೊಂಡಿದೆ ಎಂದು ಮಾಹಿತಿ ದೊರೆತಿದೆ.

ನ.19 ರಂದು ಮುಡಾ ಮಾಜಿ ಆಯುಕ್ತ ನಟೇಶ್ ವಿಚಾರಣೆ ನಡೆಸಲಾಗುತ್ತದೆ ಎಂದು ಮಾಹಿತಿ ದೊರೆತಿದ್ದು. ಹಿಂದಿನ ಆಯುಕ್ತ ದಿನೇಶ್​ ಕುಮಾರ್​ ಅವರ ವಿಚಾರಣೆ ನಡೆಸುತ್ತಾರೋ ಇಲ್ಲವೋ ಎಂಬ ಮಾಹಿತಿ ಇಲ್ಲಿಯವರೆಗೆ ದೊರೆತಿಲ್ಲ. ಒಟ್ಟಾರೆಯಾಗಿ ಮೂಡಾ ಪ್ರಕರಣದಲ್ಲಿ ಆದಷ್ಟು ಬೇಗ ತನಿಖಾ ವರದಿಯನ್ನು ನ್ಯಾಯಲಯಕ್ಕೆ ಸಲ್ಲಿಸಲು ಸಿದ್ದತೆ ನಡೆಸಲಾಗಿದೆ.

Exit mobile version