Site icon PowerTV

30 ಜನರಿದ್ದ ಖಾಸಗಿ ಬಸ್​ ಪಲ್ಟಿ : ಗಾಯಾಳುಗಳು ಆಸ್ಪತ್ರೆಗೆ ದಾಖಲು

ತುಮಕೂರು: ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಖಾಸಗಿ ಬಸ್ ಅಪಘಾತವಾಗಿದ್ದು. ಚಾಲಕನ ನಿಯಂತ್ರಣ ತಪ್ಪಿದ ಬಸ್​​ ನಡುರಸ್ತೆಯಲ್ಲೆ ಪಲ್ಟಿಯಾಗಿದ್ದು. ಬಳ್ಳಾರಿಯಿಂದ ಬೆಂಗಳೂರಿನ ಕಡೆಗೆ ಬರುತ್ತಿದ್ದ ಬಸ್​​ ಪಲ್ಟಿಯಾಗಿ ಅನಾಹುತವಾಗಿದೆ.

ನಾಗಶ್ರೀ ಟೂರ್ಸ್ ಅಂಡ್ ಟ್ರಾವೆಲ್ಸ್ ಒಡೆತನಕ್ಕೆ ಸೇರಿದ ಬಸ್ ಪಲ್ಟಿಯಾಗಿದೆ ಎಂದು ಮಾಹಿತಿ ದೊರೆತಿದ್ದು. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹೆಗ್ಗನಹಳ್ಳಿ ಬಳಿ ಘಟನೆ ನಡೆದಿದೆ.  ಬಳ್ಳಾರಿಯಿಂದ ಬೆಂಗಳೂರು ಕಡೆ ಬರುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿದ್ದು ಸುಮಾರು 30 ಜನ ಪ್ರಯಾಣಿಕರಿದ್ದ ಬಸ್ ಅಪಘಾತವಾಗಿ ಅವಘಡ ಸಂಭವಿಸಿದೆ. ಬಸ್​​ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು. ಗಾಯಾಳುಗಳನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದಿಂದ ಹೆದ್ದಾರಿಯಲ್ಲಿ ಟ್ರಾಫಿಕ್​​ ಜಾಮ್​ ಉಂಟಾಗಿದ್ದು ಕಳ್ಳಂಬೆಳ್ಳ ಪೋಲಿಸ್​​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version