Site icon PowerTV

ಮಹಾರಾಷ್ಟ್ರ ಚುನಾವಣೆ ಶ್ರೀಮಂತರು ಮತ್ತು ಬಡವರ ನಡುವಿನ ಯುದ್ಧವಾಗಿದೆ : ರಾಹುಲ್ ಗಾಂಧಿ

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹಾಗೂ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷಗಳನ್ನೊಳಗೊಂಡ ಮಹಾ ವಿಕಾಸ ಆಘಾಡಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ‘ಜಾತಿ ಗಣತಿ’ ನಡೆಸುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಾರಾಷ್ಟ್ರ ಚುನಾವಣೆಯು ಸಿದ್ಧಾಂತಗಳ ಚುನಾವಣೆಯಾಗಿದೆ. ಆದೇ ರೀತಿ ಒಂದಿಬ್ಬರು ಕೋಟ್ಯಧಿಪತಿಗಳು ಮತ್ತು ಬಡವರ ನಡುವಿನ ಯುದ್ಧವಾಗಿದೆ’ ಎಂದು ಹೇಳಿದ್ದಾರೆ. ‘ಬಿಜೆಪಿಗರು ಕೋಟ್ಯಂತರ ರೂಪಾಯಿ ಮೌಲ್ಯದ ಧಾರಾವಿ ಅಭಿವೃದ್ಧಿ ಯೋಜನೆಯ ಜಾಗವನ್ನು ಉದ್ಯಮಿ ಗೌತಮ್ ಅದಾನಿಗೆ ಹಸ್ತಾಂತರಿಸಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.

ಕೋಟ್ಯಧಿಪತಿಗಳು ಮುಂಬೈ ಭೂಮಿಯನ್ನು ಕಬಳಿಸಲು ಬಯಸುತ್ತಿದ್ದಾರೆ. ಆದರೆ, ನಾವು ಮಹಾರಾಷ್ಟ್ರದ ರೈತರು, ಬಡವರು, ನಿರುದ್ಯೋಗಿಗಳು, ಯುವಕರಿಗೆ ಸಹಾಯವಾಗಬೇಕು ಎಂಬುದು ನಮ್ಮ ಚಿಂತನೆಯಾಗಿದೆ ಎಂದು ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.

Exit mobile version