Site icon PowerTV

ಮಹಿಳೆ ಮೇಲೆ ಚಿರತೆ ದಾಳಿ : ಸಾ*ವು

ನೆಲಮಂಗಲ : ತೋಟದಲ್ಲಿ ಮೇವು ತರಲು ಹೋಗಿದ್ದ ಮಹಿಳೆಯ ಮೇಲೆ ಚಿರತೆ ದಾಳಿಯಾಗಿದ್ದು. ಮಹಿಳೆಯ ಮೇಲೆ ದಾಳಿ ಮಾಡಿದ ಚಿರತೆ ಮಹಿಳೆಯ ರುಂಡವನ್ನೆ ಹೊತ್ತೊಯ್ದಿದೆ ಎಂಬ ಆಘಾತಕಾರಿ ಮಾಹಿತಿ ದೊರೆತಿದೆ.

ನೆಲಮಂಗಲ ತಾಲ್ಲೂಕಿನ ಕಂಬಾಳು ಗೊಲ್ಲರಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು. ನಿನ್ನೆ(ನ.17) ಸಂಜೆ 5:30ಕ್ಕೆ ಕರಿಯಮ್ಮ (45) ಎಂಬ ಮಹಿಳೆ ತೋಟದಲ್ಲಿ ಮೇವು ತರಲು ಹೋಗಿದ್ದ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿ ಮಹಿಳೆಯ ರುಂಡವನ್ನು ಹೊತ್ತೊಯ್ದಿದೆ. ಮಹಿಳೆಯ ಮೃತದೇಹವನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಕಳೆದ ವಾರವು ಸಹ ವ್ಯಕ್ತಿ ಒಬ್ಬರ ಮೇಲೆ ಚಿರತೆ ದಾಳಿ ನಡೆಸಿತ್ತು ಎಂದು ಮಾಹಿತಿ ದೊರೆತಿದ್ದು. ಅರಣ್ಯ ಇಲಾಖೆ ಕೇವಲ ಬೋನ್​​ ಅಳವಡಿಸಿ ನಿರ್ಲಕ್ಷ್ಯ ತೋರಿರುವುದರಿಂದಲೆ ದಾಳಿಯಾಗಿದೆ ಎಂದು ಅರಣ್ಯ ಇಲಾಖೆಯ ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Exit mobile version