Site icon PowerTV

ಎಎಪಿ ತೊರೆದ ಬೆನ್ನಲ್ಲೇ ಬಿಜೆಪಿಗೆ ಸೇರಿದ ಕೈಲಾಶ್ ಗೆಹ್ಲೋಟ್​​

ದೆಹಲಿ : ಎಎಪಿ ಪಕ್ಷ ಮತ್ತು ದೆಹಲಿಯ ಸರ್ಕಾರದ ಸಾರಿಗೆ ಸಚಿವ ಸ್ಥಾನ ತೊರೆದ ಬೆನ್ನಲ್ಲೇ ಕೈಲಾಶ್ ಗೆಹ್ಲೋಟ್​​ ಬಿಜೆಪಿ ಪಕ್ಷ ಸೇರಿದ್ದಾರೆ. ಕೇಂದ್ರ ಸಚಿವ ಮನೋಹರ ಲಾಲ್ ಖಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಸೇರಿ ಇತರ ನಾಯಕರ ಉಪಸ್ಥಿತಿಯಲ್ಲಿ ಗೆಹ್ಲೋಟ್​ ಸೋಮವಾರ ಬಿಜೆಪಿಗೆ ಸೇರಿದರು. ಪಕ್ಷವು ವಿವಾದಗಳಿಗೆ ತುತ್ತಾಗಿರುವುದು ಹಾಗೂ ಭರವಸೆಗಳನ್ನು ಈಡೇರಿಸದೆ ಇರುವುದು ರಾಜೀನಾಮೆಗೆ ಕಾರಣ’ ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದರು.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರಾಜೀನಾಮೆ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ಅವರು, ‘ಕೇಜ್ರವಾಲ್ ಅವರು ತಮ್ಮ ಹಿಂದಿನ ಸರ್ಕಾರಿ ನಿವಾಸದಲ್ಲಿ ಐಷಾರಾಮಿ ವಸ್ತುಗಳಿಗಾಗಿ ಕೋಟಿಗಟ್ಟಲೆ ಹಣ ವ್ಯಯಿಸಿದ್ದರು ಎಂದು ಬಿಜೆಪಿ ಆರೋಪಿಸಿತ್ತು. ಕೇಜ್ರವಾಲ್ ಅವರು ಇದ್ದ ಸರ್ಕಾರಿ ನಿವಾಸವನ್ನು ಬಿಜೆಪಿಯು ‘ಶೀಷಮಹಲ್’ ಎಂದು ಕರೆದಿತ್ತು’ ಎಂದಿದ್ದಾರೆ.

Exit mobile version