Site icon PowerTV

ನೀರಿನ ಡ್ರಮ್​​ನಲ್ಲಿ ಬಿದ್ದು 3 ವರ್ಷದ ಮಗು ಸಾ*ವು

ಹಾವೇರಿ : ಚಿಕ್ಕ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗುವ ಪೋಷಕರು ಕಡ್ಡಾಯವಾಗಿ ನೋಡಲೇಬೇಕಾದ ಸ್ಟೋರಿಯಿದು. ಮನೆಯಲ್ಲಿ ಆಟವಾಡುತ್ತಿದ್ದ ಮಗು ಬಚ್ಚಲು ಮನೆಯಲ್ಲಿದ್ದ ನೀರಿನ ಬ್ಯಾರಲ್​ಗೆ ಬಿದ್ದು ಸಾವನ್ನಪ್ಪಿದೆ ಎಂದು ಮಾಹಿತಿ ದೊರೆತಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಚಂದಾಪುರ ತಾಂಡದಲ್ಲಿ ಘಟನೆ ನಡೆದಿದ್ದು. ಯಲ್ಲಮ್ಮ ಶಂಕರ್ ಲಮಾಣಿ ದಂಪತಿಗಳು ನೆನ್ನೆ (ನ.17) ತಮ್ಮ ಮೂರು ವರ್ಷದ ಮಗು ಅದಿತ್ಯ ಲಮಾಣಿಯನ್ನು ಮನೆಯಲ್ಲಿ ಬಿಟ್ಟುಹೋಗಿದ್ದರು. ತನ್ನ ಅಕ್ಕನ ಜೊತೆ ಆಟವಾಡುತ್ತಿದ್ದ ಮಗು ಆಟವಾಡುತ್ತಾ ಬಚ್ಚಲು ಮನೆಗೆ ಹೋಗಿದೆ. ಬಚ್ಚಲು ಮನೆಯಲ್ಲಿಟ್ಟ ಡ್ರಮ್​ ನೀರಿನಲ್ಲಿ ಆಟವಾಡುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದು ಮಗು ಸಾವನ್ನಪ್ಪಿದೆ ಎಂದು ಮಾಹಿತಿ ದೊರೆತಿದೆ.

ಪ್ರಕರಣ ಸಂಬಂಧ ಬಂಕಾಪುರ ಪೋಲಿಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೋಷಕರು ಇನ್ನಾದರು ಎಚ್ಚರಿಕೆಯಿಂದ ಇರುಬೇಕು ಎಂಬುದು ಪವರ್​​ ಟಿವಿಯ ಕಳಕಳಿಯಾಗಿದೆ.

 

Exit mobile version